ಕ್ರಿಸ್‌ಮಸ್ ಗಿಫ್ಟ್! ಬಿಜೆಪಿಯಿಂದ ಉಮಾಭಾರತಿ ಅಮಾನತು ತೆರವು
ಕ್ರಿಸ್‌ಮಸ್ ಗಿಫ್ಟ್! ಬಿಜೆಪಿಯಿಂದ ಉಮಾಭಾರತಿ ಅಮಾನತು ತೆರವು
ರೋಗಿ ಬಯಸಿದ್ದೂ ಹಾಲು ಅನ್ನ , ವೈದ್ಯ ಹೇಳಿದ್ದೂ ಹಾಲು ಅನ್ನ!
ಬಿಜೆಪಿಯಿಂದ ಉಮಾಭಾರತಿ ಅವರ ಉಚ್ಛಾಟನೆಯನ್ನು ತೆರವುಗೊಳಿಸಿರುವುದಾಗಿ ಪಕ್ಷದ ಮೂಲಗಳು ಡಿ.24ರ ಶುಕ್ರವಾರ ತಿಳಿಸಿವೆ. ಇದರಿಂದಾಗಿ ಬಿಜೆಪಿಗೆ ಮರಳುವ ಉಮಾಭಾರತಿ ಅವರ ಆಸೆ ಈಡೇರಿದಂತಾಗಿದೆ.
ಪಕ್ಷದ ನಾಯಕತ್ವವನ್ನು ಪ್ರಶ್ನಿಸುವ ಮೂಲಕ ಹಿರಿಯ ನಾಯಕರಿಗೆ ಮುಜುಗರ ಉಂಟು ಮಾಡಿದ್ದ ಆರೋಪದ ಮೇರೆಗೆ ಉಮಾಭಾರತಿ ಅವರನ್ನು ನವಂಬರ್ 10ರಂದು ಬಿಜೆಪಿಯಿಂದ ಅಮಾನತುಗೊಳಿಸಲಾಗಿತ್ತು . ಆನಂತರ ತಮ್ಮ ನಡವಳಿಕೆಗೆ ಕ್ಷಮೆ ಯಾಚಿಸಿ ಪಕ್ಷದ ಅಧ್ಯಕ್ಷ ಎಲ್.ಕೆ.ಅಡ್ವಾಣಿಯವರಿಗೆ ಉಮಾಭಾರತಿ ಪತ್ರ ಬರೆದಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications