2004ರ ನಗೆಯ ಕೊನೆಯಂಕ;ಅಪರಂಜಿ-ಕೊರವಂಜಿ ಹಾಸ್ಯೋತ್ಸವ
2004ರ ನಗೆಯ ಕೊನೆಯಂಕ;ಅಪರಂಜಿ-ಕೊರವಂಜಿ ಹಾಸ್ಯೋತ್ಸವ
ಮೊದಲು ಬಂದವರಿಗೆ ಸೀಟು, ಉಳಿದವರಿಗೆ ಸ್ಟಾಂಡಿಂಗೇ ಗತಿ.......
ನಗರದ ಜಯನಗರದ ಎಚ್.ಎನ್.ಸಭಾಂಗಣದಲ್ಲಿ ಶನಿವಾರ(ಡಿ.25) ನಗೆಯ ಹಬ್ಬ. ಕೊರವಂಜಿ- ಅಪರಂಜಿ ಟ್ರಸ್ಟ್ ಹಾಸ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ. ಹಾಸ್ಯೋತ್ಸವ ಅಂದ್ರೆ ಹೀಗಿರಬೇಕು ಎಂಬಂತೆ ವರ್ಷದಿಂದ ವರ್ಷಕ್ಕೆ ಹಾಸ್ಯೋತ್ಸವ ಹೆಚ್ಚು ಹೆಚ್ಚು ಜನರನ್ನು ನಗಿಸುತ್ತಿದೆ. ಹಾಸ್ಯೋತ್ಸವಕ್ಕೆ ಈಗ ದಶಕದ ಸಂಭ್ರಮ ಬೇರೆ ಸೇರಿಕೊಂಡಿದೆ.
ಹಾಸ್ಯಬರಹಗಾರರಾದ ಟಿ.ಸುನಂದಮ್ಮ ಮತ್ತು ಎಸ್.ಎನ್.ಶಿವಸ್ವಾಮಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವಿದೆ. ಜೊತೆಗೆ ನಿಮ್ಮನ್ನು ಬಿದ್ದು ಬಿದ್ದು ನಗುವಂತೆ ಮಾಡಲು ನಾನಾ ರೀತಿಯ ಐಟಂಗಳಿವೆ. ನೀವು ಮುಖ ಊದಿಸಿಕೊಂಡು ಕೂತರು ನಗೆ ಅರಳುವಂತೆ ಮಾಡುವ ಬಳಗವೊಂದು ಇಲ್ಲಿದೆ. ಕಾರ್ಯಕ್ರಮಗಳ ಪಕ್ಷಿನೋಟ ಗಮನಿಸಿ;
- ಹಾಸ್ಯಪುರಾಣ- ಹಿರೇಮಗಳೂರು ಕಣ್ಣನ್
- ಹಾಸ್ಯ ಹನಿ- ಡುಂಡಿರಾಜ್
- ಯಮನ ಸೋಲು- ರಚನೆ: ಶ್ರೀರಂಗ, ಪ್ರದರ್ಶಿಸುವ ತಂಡ: ಕಲಾ ಗಂಗೋತ್ರಿ, ನಿರ್ದೇಶಕ: ಬಿ.ವಿ.ರಾಜಾರಾ.
- ಯಂತದು ಮಾರಾಯ್ರೆ- ಭುವನೇಶ್ವರಿ ಹೆಗಡೆ.
- ಹಾಸ್ಯ ಗಂಗಾವತರಣ- ಪ್ರಾಣೇಶ್
- ಜಾನಪದ ಹಾಸ್ಯಗೀತೆಗಳು- ಬಾನಂದೂರು ಕೆಂಪಯ್ಯ
- ಶ್ರೀಕೃಷ್ಣ ಸಂಧಾನ- ಫೈನಲ್ಸ್ ತಂಡ
- ಹಾಸ್ಯ ರಂಜನೆ- ಮೈಸೂರು ಆನಂದ್
- ಅಣಕು- ಇಣುಕು- ತಂಡ: ಕ್ಷಮಾ, ಸ್ಮಿತಾ, ಎನ್.ರಾಮನಾಥ್, ಅಶ್ವಥ್, ವೈ.ವಿ.ಗುಂಡೂರಾವ್
- ಗಾನವಿನೋದಿನಿ ತಂಡದಿಂದ ಸಮೃದ್ಧ ರಂಜನೆ
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications