ವೆಂಕಟಾಚಲರಿಗೆ ಕಡಿವಾಣ; ಉಪಲೋಕಾಯುಕ್ತರಾಗಿ ಬಸವನಗೌಡ
ವೆಂಕಟಾಚಲರಿಗೆ ಕಡಿವಾಣ; ಉಪಲೋಕಾಯುಕ್ತರಾಗಿ ಬಸವನಗೌಡ
ಹೆಚ್ಚಿನ ಅಧಿಕಾರ ಕೋರಿದರೆ, ಇರುವ ಅಧಿಕಾರ ಮೊಟಕುಗೊಳಿಸಿದ ಧರ್ಮಸಿಂಗ್
ಬಹು ವರ್ಷಗಳಿಂದ ಖಾಲಿ ಇದ್ದ ಹುದ್ದೆಯನ್ನು ತುಂಬಿ ಲೋಕಾಯುಕ್ತವನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಬಸವನಗೌಡರ ನೇಮಕವನ್ನು ಸರಕಾರ ಸಮರ್ಥಿಸಿಕೊಂಡಿದೆ.
ಭ್ರಷ್ಟತೆಯ ವಿರುದ್ಧ ಸಮರ ಸಾರಿದ್ದ ವೆಂಕಾಚಲ ಲೋಕಾಯುಕ್ತಕ್ಕೆ ಮತ್ತಷ್ಟು ಅಧಿಕಾರ ನೀಡುವಂತೆ ಸರಕಾರವನ್ನು ಕೋರಿದ್ದರು. ಆದರೆ ಸರಕಾರ ವ್ಯತಿರಿಕ್ತವಾಗಿ ಸ್ಪಂದಿಸಿ ಅವರ ಅಧಿಕಾರವನ್ನು ಮೊಟಕು ಗೊಳಿಸಲಾಗಿದೆ ಎಂಬ ದೂರು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ವೆಂಕಟಾಚಲ ಈಗ ಪವರ್‌ಲೆಸ್ ಚೀಫ್ ಆಗಿದ್ದಾರೆ. ಸರಕಾರಿ ಕಚೇರಿಗಳ ಮೇಲೆ ದಾಳಿ, ತಪಾಸಣೆ, ನೌಕರರ ನೇರ ವಿಚಾರಣೆ, ಸರಕಾರಕ್ಕೆ ಭ್ರಷ್ಟತೆಯ ಬಗ್ಗೆ ವರದಿ ಮಾಡುವುದು ಮತ್ತಿತರ ಅಧಿಕಾರದಿಂದ ವಂಚಿತರಾಗಿದ್ದಾರೆ.
ಅತೃಪ್ತಿ ಇಲ್ಲ : ಉಪ ಲೋಕಾಯುಕ್ತರ ನೇಮಕದಿಂದ ನನ್ನ ಕೆಲಸ ಹಗುರವಾಗಿದೆ. ಅಲ್ಲದೇ ಭ್ರಷ್ಟತೆಯ ವಿರುದ್ಧದ ನನ್ನ ಸಮರಕ್ಕೆ ಬಸವನಗೌಡ ಮತ್ತಷ್ಟು ಬಲ ತುಂಬಲಿದ್ದಾರೆ ಎಂದು ಲೋಕಾಯುಕ್ತ ವೆಂಕಟಾಚಲ ಪ್ರತಿಕ್ರಿಯಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications