ನವ ವಧು-ವರರಿಗೆ ಸರಕಾರದಿಂದ ಹನಿಮೂನ್ ಪ್ಯಾಕೇಜ್-ಜಯಕುಮಾರ್
ನವ ವಧು-ವರರಿಗೆ ಸರಕಾರದಿಂದ ಹನಿಮೂನ್ ಪ್ಯಾಕೇಜ್-ಜಯಕುಮಾರ್
ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರದಿಂದ 144 ಕೋಟಿಗೆ ಮನವಿ
ನವ ವಧು-ವರರಿಗಾಗಿ ಹೊಸ ಪ್ಯಾಕೇಜ್ ಪ್ರವಾಸವನ್ನು ಸರಕಾರ ರೂಪಿಸಿದೆ ಎಂದು ಪ್ರವಾಸೋದ್ಯಮ ಸಚಿವ ಡಿ.ಟಿ.ಜಯಕುಮಾರ್ ತಿಳಿಸಿದರು. ಡಿ.22ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಅವಕಾಶವನ್ನು ಪೋಷಕರು ಬಳಸಿಕೊಂಡು ಹೊಸ ಜೋಡಿಯನ್ನು ಅರ್ಥಪೂರ್ಣವಾಗಿ ಆಶೀರ್ವದಿಸಬಹುದು. ಕೂಪನ್‌ಗಳನ್ನು ಖರೀದಿಸಿದರೆ, ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿ ಪ್ರವಾಸಕ್ಕೆ ಅವಕಾಶವಿದೆ ಎಂದರು.
ರಾಜ್ಯದಲ್ಲಿ ಅತ್ಯಾಕರ್ಷಕ ಪ್ರವಾಸಿ ಕೇಂದ್ರಗಳಿವೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಇವುಗಳನ್ನು ಬಳಸಿಕೊಳ್ಳಬಹುದು. ಈ ಬಗೆಗೆ ಹಿಂದಿನ ಸರಕಾರಗಳು ನಿರ್ಲಕ್ಷ್ಯ ತೋರಿಸಿವೆ. ಪ್ರವಾಸೋದ್ಯಮ ಇಲಾಖೆಯು ಶಿಕ್ಷಣ ಇಲಾಖೆಯಾಂದಿಗೆ ಸಮಾಲೋಚಿಸಿ, ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ಯಾಕೇಜ್ ಪ್ರವಾಸವನ್ನು ರೂಪಿಸಲಾಗುವುದಾಗಿ ಸಚಿವರು ಹೇಳಿದರು.
ಅನುಕೂಲಕರ ರಸ್ತೆಗಳನ್ನು ನಂದಿ ಬೆಟ್ಟ ಮತ್ತು ಚಾಮುಂಡಿ ಬೆಟ್ಟದಲ್ಲಿ ನಿರ್ಮಿಸಲಾಗುವುದು. ಜೋಗ್‌ಫಾಲ್ಸ್, ಶ್ರವಣಬೆಳಗೊಳ, ಲಾಲ್‌ಬಾಗ್‌ನಲ್ಲಿ ಖಾಸಗೀ ಹೂಡಿಕೆ ಮೂಲಕ ಬಾಟನಿಕಲ್ ಗಾರ್ಡನ್ ನಿರ್ಮಿಸಲು ಉದ್ದೇಶಿಸಲಾಗಿದೆ. ರಾಜ್ಯ ಸರಕಾರ 26 ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗಾಗಿ 144.43 ಕೋಟಿ ರೂ.ಗಳ ನೆರವಿನ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿದೆ ಎಂದು ಡಿ.ಟಿ.ಜಯಕುಮಾರ್ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications