ಲೇಖಕಿ ಗೀತಾ ನಾಗಭೂಷಣರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಲೇಖಕಿ ಗೀತಾ ನಾಗಭೂಷಣರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಹೈದ್ರಾಬಾದ್‌ ಕರ್ನಾಟಕದ ಬರಹಗಾರರಿಗೆ ಮೊದಲ ಬಾರಿಗೆ ಮಣೆ

ಬೆಂಗಳೂರು : ಕನ್ನಡದ ಖ್ಯಾತ ಲೇಖಕಿ ಗೀತಾ ನಾಗಭೂಷಣ್‌ ಸೇರಿದಂತೆ ವಿವಿಧ ಭಾಷೆಯ 22 ಮಂದಿ ಖ್ಯಾತನಾಮರಿಗೆ 2004ರ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ದೊರೆತಿದೆ.

ಗೀತಾ ನಾಗಭೂಷಣ್‌ರವರ ‘ಬದುಕು’ ಕಾದಂಬರಿಗೆ ಈ ಸಾಲಿನ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪ್ರಕಟಿಸಲಾಗಿದೆ. ಈ ಕಾದಂಬರಿಗೆ ಹಲವು ಪ್ರಶಸ್ತಿ ಈಗಾಗಲೇ ದೊರೆತಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಹೈದರಾಬಾದ್‌ ಕರ್ನಾಟಕದ ಮೊದಲ ಸಾಹಿತಿ ಎನ್ನುವ ಹೆಮ್ಮೆ ಗೀತಾ ನಾಗಭೂಷಣ ಅವರದಾಗಿದೆ.

ಪ್ರಶಸ್ತಿ ವಿಜೇತರ ಪಟ್ಟಿ:

ಕವಿಗಳಾದ ಹಿರೇಂದ್ರ ನಾಥ್‌ ದತ್ತಾ (ಅಸ್ಸಾಮಿ), ಗುಲಾಂ ನಬಿ ಫಿರಾಕ್‌ (ಕಾಶ್ಮೀರಿ), ಚಂದ್ರಭಾನು ಸಿಂಗ್‌ (ಮೈಥಿಲಿ), ಬಿರೇಂದ್ರಜಿತ್‌ ನೊರೆಮ್‌ (ಮಣಿಪುರಿ), ತಮಿಳನ್ಬನ್‌ (ತಮಿಳು), ಕಾದಂಬರಿಕಾರರಾದ ಸದಾನಂದ್‌ ದೇಶಮುಖ್‌ (ಮರಾಠಿ), ನಂದ ಭರದ್ವಾಜ್‌ (ರಾಜಸ್ತಾನಿ), ನವೀನ್‌ (ತೆಲುಗು) ಹಾಗೂ ಪ್ರಬಂಧಕಾರರಾದ ಸುಧೀರ್‌ ಚಕ್ರವರ್ತಿ (ಬಂಗಾಳಿ), ಶಿವನಾಥ್‌ (ದೋಗ್ರಿ), ಪ್ರಫುಲ್ಲ ಕುಮಾರ್‌ ಮೊಹಾಂತಿ (ಒರಿಯಾ), ಪಂಜಾಬಿ ವಿಮರ್ಶಕ ಸುತಿಂದರ್‌ ಸಿಂಗ್‌ ಹಾಗೂ ಗುಜರಾತಿ ವಿಮರ್ಶಕ ಅಮೃತ್‌ಲಾಲ್‌ ವೆಗಾದ್‌.

ಪ್ರಶಸ್ತಿಯು 50 ಸಾವಿರ ರೂ. ನಗದು ಹಾಗೂ ನೆನಪಿನ ಫಲಕವನ್ನು ಒಳಗೊಂಡಿದೆ. 2005ರ ಫೆಬ್ರುವರಿಯಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಕಾರ್ಯದರ್ಶಿ ಕೆ.ಸಚ್ಚಿದಾನಂದ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+