72ನೇ ಹುಟ್ಟುಹಬ್ಬದಲ್ಲಿ ಕನ್ನಡ ಶಾಲೆ ಕನಸು ಕಂಡ ಡಾ.ಅನಂತಮೂರ್ತಿ
72ನೇ ಹುಟ್ಟುಹಬ್ಬದಲ್ಲಿ ಕನ್ನಡ ಶಾಲೆ ಕನಸು ಕಂಡ ಡಾ.ಅನಂತಮೂರ್ತಿ
ಮುಖ್ಯಮಂತ್ರಿಧರ್ಮಸಿಂಗ್‌ರಿಂಂದ ‘ಅನಂತ ಸಾಹಿತ್ಯ-ಅನಂತ ಮೂರ್ತಿ’ ಕೃತಿ ಬಿಡುಗಡೆ
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸುಂದರ ಪ್ರಕಾಶನ ಆಯೋಜಿಸಿದ್ದ ‘ಅನಂತ ಸಾಹಿತ್ಯ-ಅನಂತಮೂರ್ತಿ’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಠಗಳು ಜನಪರ ಕೆಲಸದಲ್ಲಿ ತೊಡಗಬೇಕು. ಕಂಚಿಮಠದ ಪ್ರಕರಣ ನನಗೆ ಸಂಕಟ ತಂದಿದೆ. ಅವರು ತಪ್ಪು ಮಾಡಿದ್ದರೆ ನಾವು ಸಂತೋಷ ಪಡುವ ಅಗತ್ಯ ಇಲ್ಲ. ರೋಮನ್ ಕೆಥೋಲಿಕ್ ಚರ್ಚ್‌ನಲ್ಲಿ ಎಷ್ಟು ಕೆಟ್ಟ ಪೋಪ್‌ಗಳು ಬಂದಿಲ್ಲ ? ಇಲ್ಲಿ ವ್ಯಕ್ತಿಗಿಂತಲೂ ಅದರ ಹಿಂದಿನ ಪರಂಪರೆ ಮುಖ್ಯವಾಗುತ್ತದೆ. ವ್ಯಕ್ತಿಗಳು ಮರೆಯಾದರೂ ನಮ್ಮ ಪೂರ್ವಜರು ಕಟ್ಟಿದ ಸಂಸ್ಥೆಗಳು ಉಳಿಯುತ್ತವೆ. ಅವು ಉಳಿಯಬೇಕು ಕೂಡಾ ಎಂದರು.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ತಾತ್ವಿಕ ಬದ್ಧತೆಯನ್ನು ಹೊಂದಿದ್ದರು. ಅಂತಹ ರಾಜಕಾರಣಿಗಳು ಈಗ ಇಲ್ಲ. ಅವರ ಕಾಲದಲ್ಲಿ ಕವಿಗಳಿಗೆ, ಕಲಾವಿದರಿಗೆ ಒಂದು ಸ್ಥಾನವಿತ್ತು ಎಂದು ಅನಂತಮೂರ್ತಿ ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮಿ, ಪ್ರೋ.ಜಿ.ವೆಂಕಟಸುಬ್ಬಯ್ಯ, ವ್ಯಾಸರಾಯ ಬಲ್ಲಾಳ, ಡಾ.ಚಂದ್ರಶೇಖರ್ ಕಂಬಾರ, ವಿಶ್ವೇಶ್ವರ ಭಟ್ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications