ಜೋಡಿಕೊಲೆ ಪ್ರಕರಣ:ಆಂಧ್ರದ ಮಾಜಿ ಸಚಿವಗೆ ಜೀವಾವಧಿ ಶಿಕ್ಷೆ
ಜೋಡಿಕೊಲೆ ಪ್ರಕರಣ:ಆಂಧ್ರದ ಮಾಜಿ ಸಚಿವಗೆ ಜೀವಾವಧಿ ಶಿಕ್ಷೆ
ತೆಲುಗುದೇಶಂ ಮುಖಂಡ ರಾಮ ಸುಬ್ಬಾರೆಡ್ಡಿ ಸೇರಿದಂತೆ ಏಳು ಮಂದಿ ಮೇಲಿನ ಆರೋಪ ಸಾಬೀತು
ಮಾಜಿ ಸಚಿವ ಹಾಗೂ ತೆಲುಗುದೇಶಂ ಮುಖಂಡ ರಾಮ ಸುಬ್ಬಾರೆಡ್ಡಿ ಸೇರಿದಂತೆ ಏಳು ಮಂದಿಗೆ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿತು. 1991ರ ಡಿಸೆಂಬರ್‌ನಲ್ಲಿ ಮೆಹಬೂಬ್‌ನಗರ ಜಿಲ್ಲೆಯ ಶಾದ್ ನಗರದಲ್ಲಿ ನಡೆದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಕೊಲೆಯ ಪ್ರಕರಣದಲ್ಲಿ ಈ ಶಿಕ್ಷೆ ವಿಧಿಸಲಾಗಿದೆ.
ಜಮ್ಮಲಮಡುಗು ವಿಧಾನಸಭಾ ಕ್ಷೇತ್ರದಿಂದ 1994ರಲ್ಲಿ ವಿಧಾನಸಭೆಗೆ ಚುನಾಯಿತರಾಗಿದ್ದ ಸುಬ್ಬಾರೆಡ್ಡಿ, ಚಂದ್ರಬಾಬು ಸಂಪುಟದಲ್ಲಿ ಸಚಿವರಾಗಿದ್ದರು (1995-2004).
ತೀರ್ಪು ನೀಡುವಾಗ ಸುಬ್ಬಾರೆಡ್ಡಿ ಬೆಂಬಲಿಗರು ವ್ಯಕ್ತಪಡಿಸಿದ ಆಕ್ರೋಶದಿಂದಾಗಿ ನ್ಯಾಯಾಲಯದ ಮುಂದೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು . ತೀರ್ಪಿನ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಲು ನಿರಾಕರಿಸಿರುವ ಸುಬ್ಬಾರೆಡ್ಡಿ , ಮುಂದಿನ ಕ್ರಮಕ್ಕಾಗಿ ತಮ್ಮ ವಕೀಲರೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications