Get Updates
Get notified of breaking news, exclusive insights, and must-see stories!

ನಾಡಿನೈವರು ಜಾನಪದ ಕಲಾವಿದರಿಗೆ ಕನ್ನಡ ಸಾಹಿತ್ಯಪರಿಷತ್‌ ಮನ್ನಣೆ

ನಾಡಿನೈವರು ಜಾನಪದ ಕಲಾವಿದರಿಗೆ ಕನ್ನಡ ಸಾಹಿತ್ಯಪರಿಷತ್‌ ಮನ್ನಣೆ
ಚನ್ನೇಗೌಡ, ಕಲ್ಯಾಣಮ್ಮ ಸೇರಿದಂತೆ ಐವರಿಗೆ ತಾಯಮ್ಮ ಮತ್ತು ಮಲ್ಲಯ್ಯ ಪ್ರಶಸ್ತಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಪ್ರಸಕ್ತ ಸಾಲಿನಲ್ಲಿ ತಾಯಮ್ಮ ಮತ್ತು ಎಸ್‌.ಸಿ.ಮಲ್ಲಯ್ಯ ಜಾನಪದ ಕಲಾವಿದರ ಪ್ರಶಸ್ತಿಗೆ ನಾಡಿನ ಐದು ಮಂದಿ ಜಾನಪದ ಕಲಾವಿದರನ್ನು ಆಯ್ಕೆ ಮಾಡಿದೆ.

ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಲಾವಿದರನ್ನು ಗುರ್ತಿಸಿ ಪ್ರೋತ್ಸಾಹಿಸುವುದು ಪ್ರಶಸ್ತಿಯ ಆಶಯ. ಈ ಪ್ರಶಸ್ತಿಗೆ ಹಿಂದಲತ್ತಿ ಚನ್ನೇಗೌಡ, ಕಲ್ಯಾಣಮ್ಮ, ಕದಿರಯ್ಯ, ಮುದುಕವ್ವ ಪೂಜಾರಿ, ತಾರಾಬಾಯಿ ದೊಡ್ಡಿ ಪಾತ್ರರಾಗಿದ್ದಾರೆ.

ಮೂರು ಸಾವಿರ ರೂ.ಗಳ ನಗದು ಹಣವನ್ನು ಪ್ರಶಸ್ತಿ ಒಳಗೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತುನೊಂದಿಗೆ ಕೈಜೋಡಿಸಿರುವ ವಿಧಾನ ಪರಿಷತ್ತು ಸದಸ್ಯ ಎಸ್‌.ಎಂ.ಶಂಕರ್‌(ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣರ ಅವರ ಸಹೋದರ) ತಮ್ಮ ತಂದೆ-ತಾಯಿಯ ಹೆಸರಲ್ಲಿ ಈ ಪ್ರಶಸ್ತಿಯನ್ನು ನೀಡುತ್ತಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+