ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಸಿಪ್ಪೇಗೌಡ ಅಮಾನತು
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಸಿಪ್ಪೇಗೌಡ ಅಮಾನತು
ಎರಡು ವರ್ಷದಿಂದ ಸೇವೆಗೆ ಗೈರು ಹಾಜರಾದ ಹೈಕೋರ್ಟ್ ಅಧಿಕಾರಿ ಮೇಲೆ ಕ್ರಮ
ಹೈಕೋರ್ಟ್ ನೌಕರರಾಗಿರುವ ಸಿಪ್ಪೇಗೌಡ, ಕರ್ತವ್ಯಕ್ಕೆ ಗೈರು ಹಾಜರಿಯಾಗಿದ್ದಾರೆ ಎನ್ನುವ ಆರೋಪದ ಮೇಲೆ ಹೈಕೋರ್ಟ್‌ನ ಆಡಳಿತ ವಿಭಾಗ ಅಮಾನತುಗೊಳಿಸಿದೆ. ಅಧಿಕೃತವಾಗಿ ರಜೆ ಪಡೆಯದೇ ಕಳೆದ ಎರಡು ವರ್ಷಗಳಿಂದ ಅವರು ಸೇವೆಗೆ ಹಾಜರಾಗಿಲ್ಲ ಎನ್ನಲಾಗಿದೆ.
ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್.ಕೆ. ಸೋಧಿ, ಸಿಪ್ಪೇಗೌಡರ ವಿರುದ್ಧ ನೋಟಿಸ್ ಜಾರಿ ಮಾಡಿ ಕೂಡಲೇ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದ್ದರು. ಅನಾರೋಗ್ಯದ ನೆಪ ಹೇಳಿ, ಮುಖ್ಯ ನ್ಯಾಯಮೂರ್ತಿಗಳ ಆದೇಶವನ್ನು ಸಿಪ್ಪೇಗೌಡ ಪಾಲಿಸಿರಲಿಲ್ಲ.
ಕಳೆದ ಐದು ವರ್ಷಗಳಿಂದ ಸಿಪ್ಪೇಗೌಡ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications