ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಹಸಿರುಬಾವುಟ
ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಹಸಿರುಬಾವುಟ
ನೂತನ ಸಂಪುಟದ ಮೊದಲ ಸಭೆಯಲ್ಲಿ ಮಹತ್ವದ ನಿರ್ಣಯ, ಫೆಬ್ರವರಿಯಲ್ಲಿ ಕಾಮಗಾರಿ ಶುರು
ನಗರದ ಹೊರವಲಯದ ದೇವನಹಳ್ಳಿ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಈ ಯೋಜನೆ ವಿವಾದಕ್ಕೆ ಸಿಲುಕಿ ದಶಕಗಳಿಂದ ನೆನೆಗುದಿಗೆ ಬಿದ್ದಿತ್ತು. ಮಂಗಳವಾರ ನಡೆದ ಸಂಪುಟ ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಯೋಜನೆಗೆ ಸಂಪುಟ ಸಮ್ಮತಿಸಿದ್ದು ಫೆಬ್ರವರಿ ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಯೋಜನೆಯ ವಿವರ ನೀಡಿದ ಸಚಿವ ಪಿ.ಜಿ.ಆರ್.ಸಿಂಧ್ಯ, ಯೋಜನೆಯ ವ್ಯಾಪ್ತಿಯನ್ನು ಸರಕಾರ ಸುಮಾರು 400 ಎಕರೆ ಕಡಿಮೆ ಮಾಡಿದೆ. ಅಂದರೆ 4450 ಎಕರೆಯಿಂದ 4050 ಎಕರೆಗೆ ಕುಗ್ಗಿದೆ. ಯೋಜನೆಯ ವೆಚ್ಚ 1334 ಕೋಟಿ ರೂ.ಗಳಾಗಿದ್ದು, ರಾಜ್ಯ 350 ಕೋಟಿ ರೂ.ಗಳನ್ನು ಬಡ್ಡಿರಹಿತ ಸಾಲವಾಗಿ ನೀಡಲಿದೆ. ಅದರ ಮರುಪಾವತಿಗೆ ಹತ್ತು ವರ್ಷಗಳ ಕಾಲಾವಕಾಶ ನೀಡಲಾಗಿದೆ ಎಂದರು.
ಕೆಎಸ್‌ಐಐಡಿಸಿನೊಂದಿಗೆ ಭೂಮಿ ಗುತ್ತಿಗೆ ಒಪ್ಪಂದಕ್ಕೆ ಸರಕಾರ ಸಹಿ ಹಾಕಿ, 400 ಎಕರೆ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳಲಿದೆ. ಯೋಜನೆ ಫೆಬ್ರವರಿಯಲ್ಲಿ ಆರಂಭವಾಗಲಿದೆ. ಯೋಜನೆಯ ಚೆಂಡು ಐಏಎಎಲ್ ಅಂಗಳದಲ್ಲಿದೆ ಎಂದು ಸಿಂಧ್ಯ ತಿಳಿಸಿದರು.
ಡಿ.11 ರಂದು ನಡೆದ ಸಭೆಯಲ್ಲಿ ಯೋಜನೆಗೆ ಅನುಮೋದನೆ ಪಡೆಯಲಾಗಿತ್ತು. ಯೋಜನೆ ಬಗೆಗಿನ ಗೊಂದಲಗಳು ಹಾಗೂ ಸಂದೇಹಗಳಿಗೆ ಈ ಸಭೆಯಲ್ಲಿ ಪರಿಹಾರ ಸಿಕ್ಕಿದೆ. ವಾದ ವಿವಾದಗಳ ಸುಳಿಯಲ್ಲಿ ಅಭಿವೃದ್ಧಿ ವೆಚ್ಚ 15 ಕೋಟಿಯಿಂದ 63.6 ಕೋಟಿಗೆ ಹೆಚ್ಚಳವಾಗಿದೆ. ಕಾನೂನು ಸಲಹೆ ಶುಲ್ಕ ಸಹ, 7 ರಿಂದ 17 ಕೋಟಿಗೆ ಏರಿಕೆಯಾಗಿದೆ. ಯೋಜನೆಯ ಮೂಲ ವೆಚ್ಚ 2001ರಲ್ಲಿ 1150 ಕೋಟಿಯಾಗಿತ್ತು. ಅದು 2003 ರಲ್ಲಿ 1334 ಕೋಟಿಗೆ ಹೆಚ್ಚಳವಾಗಿದೆ.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications