ಕೆಲಸ ಕೆಲಸ: ಸದ್ಯದಲ್ಲೇ 5,500 ಚಾಲಕರು-ನಿರ್ವಾಹಕರ ನೇಮಕ
ಕೆಲಸ ಕೆಲಸ: ಸದ್ಯದಲ್ಲೇ 5,500 ಚಾಲಕರು-ನಿರ್ವಾಹಕರ ನೇಮಕ
4,300 ಬಸ್ಸು ಖರೀದಿ, ಮೂಲಭೂತ ಸೌಕರ್ಯಗಳಿಗೆ 100 ಕೋಟಿ ರು.
ಕೆಎಸ್‌ಆರ್‌ಟಿಸಿಗೆ 1000 ಬಸ್ಸು , ಎನ್‌ಇಕೆಆರ್‌ಟಿಸಿಗೆ 500 ಬಸ್ಸು ಹಾಗೂ ಗ್ರಾಮೀಣ ಸಾರಿಗೆಗಾಗಿ 2,200 ಹೊಸ ಬಸ್ಸುಗಳನ್ನು ಖರೀದಿಸಲಾಗುವುದು ಎಂದು ಡಿ.19ರಂದು ಸುದ್ದಿಗಾರರಿಗೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಎನ್‌ಇಕೆಆರ್‌ಟಿಸಿ ನಿರ್ದೇಶಕರೊಂದಿಗಿನ ಸಭೆಯ ನಂತರ ಖರ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
1000 ಚಾಲಕರು ಹಾಗೂ 1000 ನಿರ್ವಾಹಕರ ನೇಮಕಾತಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಇದರೊಂದಿಗೆ ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಎನ್‌ಇಕೆಆರ್‌ಟಿಸಿಗಾಗಿ ತಲಾ ಸಾವಿರ ನಿರ್ವಾಹಕರು ಹಾಗೂ ಚಾಲಕರನ್ನು ನೇಮಿಸಿಕೊಳ್ಳಲಾಗುವುದು. 2,500 ಚಾಲಕ-ನಿರ್ವಾಹಕರನ್ನು ನೇಮಿಸಿಕೊಳ್ಳುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪ್ರಸ್ತಾವನೆ ಕೂಡ ಪರಿಶೀಲನೆಯಲ್ಲಿದೆ ಎಂದು ಖರ್ಗೆ ಹೇಳಿದರು.
ರಾಜ್ಯದಲ್ಲಿ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು 100 ಕೋಟಿ ರುಪಾಯಿ ಖರ್ಚು ಮಾಡಲಾಗುವುದು. ಬಸ್ಸು ನಿಲ್ದಾಣಗಳ ಮೇಲ್ದರ್ಜೆ, ನಿರ್ಮಾಣ ಹಾಗೂ ಇನ್ನಿತರೆ ಸೌಕರ್ಯಗಳು ಈ ಯೋಜನೆಯಲ್ಲಿ ಸೇರಿವೆ ಎಂದು ಖರ್ಗೆ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications