ವದಂತಿಗಳಿಗೆ ತೆರೆ, ಶಂಕರರಾಮನ್‌ ಪ್ರಕರಣದ ಆರೋಪಿ ಅಪ್ಪುಸೆರೆ

ವದಂತಿಗಳಿಗೆ ತೆರೆ, ಶಂಕರರಾಮನ್‌ ಪ್ರಕರಣದ ಆರೋಪಿ ಅಪ್ಪುಸೆರೆ
ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 20ಕ್ಕೆ ಏರಿಕೆ

ಚೆನ್ನೈ: ಕಂಚಿ ಶಂಕರಾಚಾರ್ಯರು ಬಂಧನಕ್ಕೊಳಗಾಗಿರುವ ಶಂಕರ ರಾಮನ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅಪ್ಪು ಅಲಿಯಾಸ್‌ ಕೃಷ್ಣಸ್ವಾಮಿಯನ್ನು ಭಾನುವಾರ (ಡಿ.19) ಬಂಧಿಸಲಾಯಿತು.

ಕಾಂಚೀಪುರಂನ ಪೊಲೀಸ್‌ ವರಿಷ್ಠಾಧಿಕಾರಿ ಪ್ರೇಮಕುಮಾರ್‌ ನೇತೃತ್ವದ ವಿಶೇಷ ಪೊಲೀಸ್‌ ತಂಡ ಆಂಧ್ರಪ್ರದೇಶದ ಚಿತ್ತೂರ್‌ ಜಿಲ್ಲೆಯ ಬಾಲಕೃಷ್ಣಪುರಂನಲ್ಲಿ ಭಾನುವಾರ ಅಪ್ಪುವನ್ನು ಬಂಧಿಸಿತು.

ಅಪ್ಪು ಸ್ವತಃ ಶರಣಾಗತನಾಗಿದ್ದು , ಆನಂತರ ಆತನನ್ನು ಬಂಧಿಸಲಾಯಿತು. ಬಂಧನದ ನಂತರ ಆತನನ್ನು ಚೆನ್ನೈಗೆ ಕರೆದೊಯ್ಯಲಾಯಿತು ಎಂದು ಅಪ್ಪು ಸಂಬಂಧಿಕರು ತಿಳಿಸಿದ್ದಾರೆ.

ಇನ್ನೊಂದು ವರದಿಯ ಪ್ರಕಾರ ಅಪ್ಪುವಿನ ಚಿಕ್ಕಪ್ಪ ಚೆಂಗಲವರಾಯನ್‌ ಅಪ್ಪು ಪೊಲೀಸರ ಮುಂದೆ ಹಾಜರಾಗಲು ಸಹಾಯ ಮಾಡಿದರು. ಆನಂತರ ಆಂಧ್ರ ಪೊಲೀಸರು ಆತನನ್ನು ತಮಿಳುನಾಡಿನ ಪೊಲೀಸರಿಗೆ ಒಪ್ಪಿಸಿದರು. ಅಪ್ಪು ಬಂಧನದೊಂದಿಗೆ ಶಂಕರರಾಮನ್‌ ಕೊಲೆ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 20ಕ್ಕೆ ಏರಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+