ಅನಂತಮೂರ್ತಿ 72: ಹುಟ್ಟುಹಬ್ಬಕ್ಕೆ‘ಅನಂತ ಸಾಹಿತ್ಯ’ ಉಡುಗೊರೆ

ಅನಂತಮೂರ್ತಿ 72: ಹುಟ್ಟುಹಬ್ಬಕ್ಕೆ‘ಅನಂತ ಸಾಹಿತ್ಯ’ ಉಡುಗೊರೆ
ಸುಂದರ ಪ್ರಕಾಶನದಿಂದ ಅಭಿನಂದನೆ- ಪುಸ್ತಕ ಅನಾವರಣ

ಬೆಂಗಳೂರು : ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಡಾ.ಯು.ಆರ್‌.ಅನಂತಮೂರ್ತಿ ಅವರಿಗೀಗ 72 ರ ಸಂಭ್ರಮ. ಕನ್ನಡದ ಹೆಮ್ಮೆಯ ಸಾಹಿತಿಯ ಹುಟ್ಟುಹಬ್ಬವನ್ನು ಅವರ ಸಾಹಿತ್ಯದ ಕುರಿತ ಪುಸ್ತಕವನ್ನು ಬಿಡುಗಡೆ ಮಾಡುವ ಮೂಲಕ ಸುಂದರ ಪ್ರಕಾಶನ ಆಚರಿಸುತ್ತದೆ.

ಅನಂತಮೂರ್ತಿಯವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಡಿಸೆಂಬರ್‌ 21ರಂದು ವಿಶಿಷ್ಠ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ. ಅಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅನಂತಮೂರ್ತಿ ದಂಪತಿಗಳಿಗೆ ಸನ್ಮಾನ ಹಾಗೂ ಅನಂತಮೂರ್ತಿಯವರ ಕೃತಿಗಳ ಕುರಿತು ರಚಿತವಾದ ‘ಅನಂತ ಸಾಹಿತ್ಯ’ ಪುಸ್ತಕ ಬಿಡುಗಡೆ ಕಾರ್ಯಕ್ರಮವಿದೆ.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಈ ಅಭಿನಂದನೆ ಹಾಗೂ ಪುಸ್ತಕ ಅನಾವರಣ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಧರ್ಮಸಿಂಗ್‌ ವಹಿಸುವರು.

ಇಗೋ ಕನ್ನಡದ ಪ್ರೊ. ಜಿ. ವೆಂಕಟಸುಬ್ಬಯ್ಯ, ಪ್ರೊ. ಎಲ್‌.ಎಸ್‌. ಶೇಷಗಿರಿ ರಾವ್‌, ವ್ಯಾಸರಾಯ ಬಲ್ಲಾಳ, ಡಾ.ರಾಜೀವ್‌ ತಾರಾನಾಥ್‌, ಡಾ. ಚಂದ್ರಶೇಖರ ಕಂಬಾರ ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ವಿಶ್ವೇಶ್ವರ ಭಟ್‌ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಇದೇ ಸಂದರ್ಭದಲ್ಲಿ ಖ್ಯಾತ ಹಿಂದೂಸ್ಥಾನಿ ಗಾಯಕ ಡಾ. ರಾಜಶೇಖರ ಮನ್ಸೂರ್‌ ಅವರ ಸಂಗೀತ ಕಚೇರಿ ನಡೆಯಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+