ವಿದ್ಯಾರ್ಥಿ ಆತ್ಮಹತ್ಯೆ: ಪಿಯುಸಿ ಪರೀಕ್ಷೆ ಪಾಸಾಗದ ಬದುಕಿಗೆ ನಮಸ್ಕಾರ
ವಿದ್ಯಾರ್ಥಿ ಆತ್ಮಹತ್ಯೆ: ಪಿಯುಸಿ ಪರೀಕ್ಷೆ ಪಾಸಾಗದ ಬದುಕಿಗೆ ನಮಸ್ಕಾರ
ಸಾವಿಗೊಂದು ಕಾರಣ ಸಿಗುವಂತೆ, ಬದುಕಿಗೊಂದು ಕಾರಣ ನಿಮ್ಮ ಮುಂದೆ ಕಾಣುತ್ತಿಲ್ಲವೇ?
ಪ್ರಶಾಂತ್‌ನಗರದ ಪೃಥ್ವಿ ಕಾಮತ್(18) ಎರಡು ಸಲ ಪಿಯೂಸಿಯಲ್ಲಿ ನಪಾಸಾಗಿದ್ದ. ಇಷ್ಟೇ...ಇದೊಂದೇ ಆತ್ಮಹತ್ಯೆಗೆ ಕಾರಣವಾಗಿದೆ. ಕೆಎಲ್‌ಇ ಕಾಲೇಜಿನ ವಿದ್ಯಾರ್ಥಿಯಾದ ಈತನಿಗೆ, ಮೊನ್ನೆ ಬಂದ ಸಪ್ಲಿಮೆಂಟರಿ ಪರೀಕ್ಷೆಯ ಫಲಿತಾಂಶ ವ್ಯತಿರಿಕ್ತವಾಗಿತ್ತು. ಅನುತ್ತೀರ್ಣನಾಗುವುದು ಅವಮಾನದ ಸಂಗತಿ ಎಂದು ಅವನಿಗೆ ಅವನೇ ಹೇಳಿಕೊಂಡಿದ್ದಾನೆ.
ನೋವು, ನಿರಾಸೆ, ಆತಂಕದಲ್ಲಿದ್ದ ಪೃಥ್ವಿಕಾಮತ್‌ಗೆ ಪೃಥ್ವಿಯೇ ಚಿಕ್ಕದಾಗಿ ಕಾಣಿಸಿದೆ. ಬುಧವಾರ ರಾತ್ರಿ ಎಲ್ಲ ಮನಸ್ಸಿನಲ್ಲಿ ಹತ್ತಾರು ಯೋಚನೆಗಳು ಸುಳಿದಾಡಿವೆ. ಬದುಕು ಅರ್ಥಹೀನ ಅನ್ನಿಸಿದೆ. ಗುರುವಾರ(ಡಿ.16) ಬೆಳಿಗ್ಗೆ ಮೇಲೆ ನೋಡಿದಾಗ ಮುಕ್ತಿ ನೀಡುವಂತೆ ಸೀಲಿಂಗ್ ಫ್ಯಾನ್ ಕಾಣಿಸಿದೆ. ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಿದ್ದ ಪೃಥ್ವಿ, ಬೆಳಿಗ್ಗೆ 8 ಗಂಟೆ ಸುಮಾರಿನಲ್ಲಿ ಸಾವಿನ ಮನೆಯನ್ನು ಪ್ರವೇಶಿಸಿದ್ದಾನೆ. ಮತ್ತೆ ವಾಪಸು ಬರಲು ಬಹುಶಃ ಪ್ರಯತ್ನಿಸಿದ್ದರೂ ಫಲಕಾರಿಯಾಗಿಲ್ಲ !
ಪರೀಕ್ಷೆಯನ್ನಷ್ಟೇ ಬದುಕೆಂದು ಕೊಳ್ಳುವ, ಪೃಥ್ವಿಕಾಮತ್ ಅಂತವರಿಗೆ ಬದುಕಿನ ಅಗಾಧತೆಯನ್ನು ಹೇಳುವವರು ಯಾರು? ಸಾವಿಗೊಂದು ಕಾರಣ ಸಿಗುವಂತೆ, ಬದುಕಿಗೊಂದು ಕಾರಣವನ್ನು ಹುಡುಕಿಕೊಳ್ಳ ಬೇಕು. ಈ ಆತ್ಯಹತ್ಯೆಯ ಸಾವಿನ ಬಗ್ಗೆ ಕನಿಕರ ಪಡಬೇಕೋ ? ಶೋಕಿಸಬೇಕೋ ? ನೀವೇ ಹೇಳಿ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications