ಯಾರಿಗೆ ಯಾವ ಖಾತೆ? ಧರ್ಮ ಸಂಪುಟ ವಿಸ್ತರಣೆ ವಿವರ ಇಲ್ಲಿವೆ..
ಬೆಂಗಳೂರು : 'ಧರ್ಮ"ಸಿಂಗ್ ರಾಜ್ಯದ ಸಂಪುಟ ವಿಸ್ತರಣೆ, ಖಾತೆಗಳ ಹಂಚಿಕೆ ಎಲ್ಲವೂ ಗುರುವಾರ(ಡಿ.16) ರಾತ್ರಿ ಕೊನೆಗೊಂಡಿದೆ. ಸಚಿವ ಸಂಪುಟಕ್ಕೆ ಸೇರ್ಪಡೆಯಾದ ನೂತನ 20 ಮಂದಿ ಸಚಿವರಿಗೆ ಖಾತೆಗಳನ್ನು ರಾಜ್ಯಪಾಲ ಟಿ.ಎನ್.ಚತುರ್ವೇದಿ ಹಂಚಿಕೆ ಮಾಡಿದ್ದಾರೆ.
ಜನತಾದಳ(ಎಸ್)ಗೆ ಪ್ರಮುಖ ಖಾತೆಗಳು ದಕ್ಕಿದ್ದು, ತುಸು ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡಿದೆ. ಚರ್ಚೆ, ಮಾತುಕತೆ, ಮನವೊಲಿಕೆ- ಹೀಗೆ ನಾನಾ ಕಸರತ್ತುಗಳ ನಡುವೆಯೇ ಅಸ್ತಿತ್ವಕ್ಕೆ ಬಂದಿರುವ ನೂತನ ಸಂಪುಟದ ಪೂರ್ಣ ವಿವರ ಇಲ್ಲಿದೆ.
- ಧರ್ಮಸಿಂಗ್(ಮುಖ್ಯಮಂತ್ರಿ) -ಗೃಹ, ಡಿಪಿಎರ್,
- ಸಿದ್ದರಾಮಯ್ಯ(ಉಪಮುಖ್ಯಮಂತ್ರಿ) -ಹಣಕಾಸು, ಅಬಕಾರಿ, ಯೋಜನೆ, ಸಾಂಸ್ಥಿಕ ಹಣಕಾಸು
- ಮಲ್ಲಿಕಾರ್ಜುನ ಖರ್ಗೆ -ಜಲಸಂಪನ್ಮೂಲ, ಸಾರಿಗೆ
- ಪಿಜಿಆರ್ ಸಿಂಧ್ಯ -ಸಣ್ಣ, ಮಧ್ಯಮ,ಬೃಹತ್ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ
- ಎಂ.ಪಿ. ಪ್ರಕಾಶ್ -ಕಂದಾಯ
- ಡಿ.ಮಂಜುನಾಥ್ -ಉನ್ನತ ಶಿಕ್ಷಣ
- ಎಸ್.ಆರ್. ಮೋರೆ -ಪೌರಾಡಳಿತ, ಕೆಯುಐಡಿಎಫ್‌ಸಿ
- ಎಚ್.ಡಿ. ರೇವಣ್ಣ -ಲೋಕೋಪಯೋಗಿ, ಇಂಧನ
- ಕೆ.ಶ್ರೀನಿವಾಸಗೌಡ -ಕೃಷಿ
- ಮಿರಾಜುದ್ದೀನ್ ಪಟೇಲ್ -ಪಶುಸಂಗೋಪನೆ, ವಕ್ಫ್
- ಪ್ರಕಾಶ್ ಬಿ. ಹುಕ್ಕೇರಿ -ಕೃಷಿ ಮಾರುಕಟ್ಟೆ
- ಆರ್.ವಿ.ದೇಶಪಾಂಡೆ -ಸಹಕಾರ
- ಡಾ.ಎಚ್.ಸಿ.ಮಹದೇವಪ್ಪ -ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್
- ಗುರುಪಾದಪ್ಪ ನಾಗಮಾರಪಲ್ಲಿ -ಅರಣ್ಯ, ಪರಿಸರ, ಜೀವಶಾಸ್ತ್ರ
- ಬಸವರಾಜ್ ಹೊರಟ್ಟಿ -ಸಣ್ಣ ಉಳಿತಾಯ, ಲಾಟರಿ, ವಿಜ್ಞಾನ, ತಂತ್ರಜ್ಞಾನ
- ಎಚ್.ಕೆ.ಪಾಟೀಲ್ -ಕಾನೂನು, ಸಂಸದೀಯ ವ್ಯವಹಾರ,
- ಸಿ.ಚನ್ನಿಗಪ್ಪ -ರೇಷ್ಮೆ
- ರಾಮಲಿಂಗಾರೆಡ್ಡಿ -ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
- ಡಿ.ಟಿ.ಜಯಕುಮಾರ್ -ಪ್ರವಾಸೋದ್ಯಮ
- ಡಾ.ವೈ.ನಾಗಪ್ಪ -ಸಮಾಜಕಲ್ಯಾಣ
- ಮಹದೇವಪ್ರಸಾದ್ -ಆಹಾರ ಮತ್ತು ನಾಗರಿಕ ಪೂರೈಕೆ
- ಅಂಜನಮೂರ್ತಿ -ವಸತಿ
- ಅಮರೇಗೌಡ ಪಾಟೀಲ್ ಬಯ್ಯಾಪುರ -ಸಕ್ಕರೆ
- ಬಿ.ಶಿವರಾಂ -ವಾರ್ತಾ, ಪ್ರಚಾರ
- ಎನ್.ಚೆಲುವರಾಯಸ್ವಾಮಿ -ಆರೋಗ್ಯ, ಕುಟುಂಬ ಕಲ್ಯಾಣ
- ಜಬ್ಬಾರ್ ಖಾನ್ ಹೊನ್ನಳ್ಳಿ -ಅಲ್ಪಸಂಖ್ಯಾತರ ಕಲ್ಯಾಣ, ಯುವಜನಸೇವೆ ಮತ್ತು ಕ್ರೀಡೆ
- ಆರ್.ಶ್ರೀನಿವಾಸ್ -ತೋಟಗಾರಿಕೆ
- ಭಾಗೀರಥಿ ಮರುಳಸಿದ್ದನಗೌಡ -ಮಹಿಳಾ, ಮಕ್ಕಳ ಕಲ್ಯಾಣ
- ಇಕ್ಭಾಲ್ ಅನ್ಸಾರಿ -ವೈದ್ಯಕೀಯ ಶಿಕ್ಷಣ
ರಾಜ್ಯ ಸಚಿವರು
- ತನ್ವೀರ್ ಸೇಠ್ -ಕಾರ್ಮಿಕ, ಹಜ್
- ಬಿ.ಸತ್ಯನಾರಾಯಣ -ಗ್ರಾಮೀಣ ನೀರು ಸರಬರಾಜು
- ಸತೀಶ್ ಜಾರಕಿಹೊಳಿ -ಜವಳಿ
(ಇನ್ಫೋ ವಾರ್ತೆ)












Click it and Unblock the Notifications