Get Updates
Get notified of breaking news, exclusive insights, and must-see stories!

ಸಚಿವನಾಗದ ಕುರಿತು ನನಗೆ ಏನೇನೂ ಬೇಸರವಿಲ್ಲ-ಪಟೇಲ್‌ ಪುತ್ರ

ಸಚಿವನಾಗದ ಕುರಿತು ನನಗೆ ಏನೇನೂ ಬೇಸರವಿಲ್ಲ-ಪಟೇಲ್‌ ಪುತ್ರ
ಜಾತ್ಯತೀತ ದಳದಲ್ಲಿ ಮಹಿಮಾ ಪಟೇಲ್‌ ಮೂಲೆಗುಂಪು?

ಚೆನ್ನಗಿರಿ : ಸಂಪುಟದಲ್ಲಿ ಸ್ಥಾನ ದೊರೆಯದ ಕಾರಣ ಕಾಂಗ್ರೆಸ್‌ ಹಾಗೂ ಜಾತ್ಯತೀತ ಜನತಾದಳಗಳ ತುಂಬ ಅತೃಪ್ತರ ದಂಡು ತುಂಬಿತುಳುಕುತ್ತಿದ್ದರೆ, ಜೆ.ಎಚ್‌. ಪಟೇಲರ ಪುತ್ರ ಹಾಗೂ ಚೆನ್ನಗಿರಿ ಶಾಸಕ ಮಹಿಮಾ ಪಟೇಲ್‌ ಮಾತ್ರ ಸಮಾಧಾನಿಯಾಗಿದ್ದಾರೆ.

ಸಂಪುಟದಲ್ಲಿ ಸ್ಥಾನ ದೊರೆಯದ ಕುರಿತು ನಾನು ನಿರಾಶನಾಗಿಲ್ಲ . ಈ ಕುರಿತು ದೇವೇಗೌಡ ಸೇರಿದಂತೆ ಯಾರನ್ನೂ ದೂರುವುದಿಲ್ಲಿ ಎಂದು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಹಿಮಾ ಪಟೇಲ್‌ ತಿಳಿಸಿದ್ದಾರೆ.

ಕಾನೂನಿನ ಪ್ರಕಾರ ಮಂತ್ರಿಮಂಡಲ ಗಾತ್ರಕ್ಕೆ ಕಡಿವಾಣವಿದೆ. ಈ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರವನ್ನು ಬ್ಯಾಲೆನ್ಸ್‌ ಮಾಡುವುದು ಅಗತ್ಯವಾಗಿದೆ. ಸರ್ಕಾರದ ಹಿತಾಸಕ್ತಿಗೆ ಯಾವುದು ಅಗತ್ಯವೋ ಆ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಮಹಿಮಾ ಪಟೇಲ್‌ ಹೇಳಿದರು. ಆದರೆ ತಮಗೆ ಸಚಿವ ಸ್ಥಾನ ದೊರೆತಿದ್ದರೆ ಕ್ಷೇತ್ರದ ಅಭಿವೃದ್ಧಿಗೆ ನೆರವಾಗುತ್ತಿತ್ತು ಎಂದು ಹೇಳುವುದನ್ನು ಮಹಿಮಾ ಪಟೇಲ್‌ ಮರೆಯಲಿಲ್ಲ .

ಚುನಾವಣೆಗೆ ಮುನ್ನ ಈ-ಟೀವಿ ಸಂದರ್ಶನದಲ್ಲಿ ಜಾತ್ಯತೀತ ಜನತಾದಳ ಪಕ್ಷದಲ್ಲಿ ತಮಗಿರುವ ಹಿಡಿತದ ಕುರಿತು ಮಹಿಮಾ ಪಟೇಲ್‌ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಆದರೆ ಚುನಾವಣಾ ನಂತರ ಮಹಿಮಾ ಪಟೇಲ್‌ರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ ಎಂದು ಅವರ ಅಭಿಮಾನಿಗಳು ದೂರುತ್ತಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+