ಭಾಗೀರಥಿ ಮರುಳಸಿದ್ಧನಗೌಡ- ಧರ್ಮ ಸಂಪುಟದಲ್ಲಿ ಏಕೈಕ ಮಹಿಳೆ!
ಭಾಗೀರಥಿ ಮರುಳಸಿದ್ಧನಗೌಡ- ಧರ್ಮ ಸಂಪುಟದಲ್ಲಿ ಏಕೈಕ ಮಹಿಳೆ!
ಅಧಿಕಾರ ಬಂದಾಗ ಮಹಿಳೆಯರು ಬದಿಗೆ ಸರಿಯಿರಿ- ರಾಜಕೀಯ ಪಕ್ಷಗಳ ಧೋರಣೆ
ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಸಂಪುಟದಲ್ಲಿ ಶಾಸ್ತ್ರಕ್ಕೆ ಒಬ್ಬರಿರಲಿ ಎಂದು ಮಹಿಳಾ ಶಾಸಕಿಗೆ ಪ್ರಾತಿನಿಧ್ಯ ನೀಡಲಾಗಿದೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಕ್ಷೇತ್ರದ ಶಾಸಕಿ ಭಾಗೀರಥಿ ಮರುಳಸಿದ್ಧನಗೌಡ ಏಕೈಕ ಮಹಿಳಾ ಸಚಿವೆಯಾಗಿ ಸ್ಥಾನ ಪಡೆದಿದ್ದಾರೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಗೊಂಡ ಏಕೈಕ ಮಹಿಳಾ ಶಾಸಕಿ ಎನ್ನುವ ಹೆಮ್ಮೆ ಭಾಗೀರಥಿ ಅವರದು. ತಮ್ಮ ಪತಿ ನಿಧನದ ನಂತರ 1988ರ ಮರುಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅಲ್ಲಿಂದ ಕಳೆದ ಮೂರು ಚುನಾವಣೆಗಳಲ್ಲಿ ಹ್ಯಾಟ್ರಿಕ್ ಸಾಧಿಸಿದ್ದಾರೆ.
ಜೆಡಿಎಸ್ : ಕಾಂಗ್ರೆಸ್ ಕತೆ ಇದಾದರೇ, ಜೆಡಿಎಸ್ ಮಹಿಳೆಯರನ್ನು ಸಂಪೂರ್ಣ ಮೂಲೆಗುಂಪು ಮಾಡಿದೆ. ಮಾಜಿ ಸಚಿವ ನಾಗಪ್ಪ ಅವರ ಪತ್ನಿ ಪರಿಮಳ ಹಾಗೂ ವಿಜಯಲಕ್ಷ್ಮಿಬಂಡಿಸಿದ್ಧೇಗೌಡ ಜೆಡಿಎಸ್ ಕಣ್ಣಿಗೆ ಬಿದ್ದಿಲ್ಲ.
ಮಹಿಳಾ ಸಬಲೀಕರಣ, ಮಹಿಳಾ ಮೀಸಲು, ಮಹಿಳೆಯರ ಕಲ್ಯಾಣ, ಮಹಿಳಾ ಕಾಳಜಿ- ಎಲ್ಲವೂ ರಾಜಕೀಯ ನಾಯಕರಿಗೆ ತೌಡು ಕುಟ್ಟುವುದಕ್ಕಷ್ಟೇ ಬಳಕೆಯಾಗುತ್ತಿರುವುದು ವಿಪರ್ಯಾಸಕರ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications