ನಟ ಬಾಲಕೃಷ್ಣ ನಮ್ಮನ್ನು ಕೊಲ್ಲಲು ಗುಂಡು ಹಾರಿಸಲಿಲ್ಲ-ಪ್ರಕರಣಕ್ಕೆ ತಿರುವು
ನಟ ಬಾಲಕೃಷ್ಣ ನಮ್ಮನ್ನು ಕೊಲ್ಲಲು ಗುಂಡು ಹಾರಿಸಲಿಲ್ಲ-ಪ್ರಕರಣಕ್ಕೆ ತಿರುವು
ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಕೊಲೆ ಪ್ರಯತ್ನದ ಆರೋಪದಿಂದ ಮುಕ್ತರಾಗುವರೇ?
ತೆಲುಗು ನಿರ್ಮಾಪಕ ಹಾಗೂ ಜ್ಯೋತಿಷಿ ಸತ್ಯನಾರಾಯಣ ಚೌಧರಿ ಹಾಗೂ ಬೆಲ್ಲಮಕೊಂಡ ಸುರೇಶ್ ಮೇಲೆ, ಬಾಲಕೃಷ್ಣ ಗುಂಡು ಹಾರಿಸಿದ್ದಾರೆ ಎನ್ನಲಾಗಿತ್ತು. ನಾಂಪಲ್ಲಿ ಕ್ರಿಮಿನಲ್ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ , ಬಾಲಕೃಷ್ಣ ನಮ್ಮ ಮೇಲೆ ಗುಂಡು ಹಾರಿಸಲಿಲ್ಲ. ಈ ಘಟನೆಯಲ್ಲಿ ಅವರದೇನೂ ತಪ್ಪಿಲ್ಲ ಎಂದು ಚೌಧರಿ ಹೇಳಿಕೆ ನೀಡಿದ್ದಾರೆ.
ಗುಂಡಿನ ದಾಳಿಗೆ ಸಿಲುಕಿದ್ದ ಸುರೇಶ್, ಚೌಧರಿ ಹೇಳಿಕೆಯನ್ನು ಸಮರ್ಥಿಸಿದ್ದಾನೆ. ನನ್ನ ಅಥವಾ ಚೌಧರಿ ಮೇಲೆ ಬಾಲಕೃಷ್ಣ ಗುಂಡು ಹಾರಿಸಲಿಲ್ಲ. ಬದಲಿಗೆ ನಮ್ಮನ್ನು ಉಳಿಸಲು ಅವರು ಪ್ರಯತ್ನಿಸಿದ್ದಾರೆ ಎಂದು ಸುರೇಶ್ ತಿಳಿಸಿದ್ದಾನೆ.
ಸಿನಿಮಾ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಟ ಬಾಲಕೃಷ್ಣ ಮತ್ತು ಚೌಧರಿ ನಡುವೆ ಮಾತುಕತೆ ನಡೆಯುವಾಗ, ಅಪರಿಚಿತ ವ್ಯಕ್ತಿ ಎಲ್ಲಿಂದಲೋ ಬಂದು ನಮ್ಮ ಮೇಲೆ ದಾಳಿಗೆ ಮುಂದಾದ. ನಟ ಬಾಲಕೃಷ್ಣ ನಮ್ಮ ರಕ್ಷಣೆಗೆ ಯತ್ನಿಸಿದರು ಎಂದು ಸುರೇಶ್ ತಿಳಿಸಿದ್ದಾನೆ.
ಜೂನ್ 4 ರಂದು ನಡೆದಿದ್ದ ಈ ಘಟನೆ ಆಂಧ್ರ ಪ್ರದೇಶದಲ್ಲಿ ವಿವಾದಕ್ಕೆ ಗ್ರಾಸವಾಗಿ, ತೀವ್ರ ಕುತೂಹಲ ಮೂಡಿಸಿತ್ತು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications