ಡಿ.17ರಂದು ಕಂಚಿಶ್ರೀ ಬಂಧ ಮುಕ್ತಿಯ ಅರ್ಜಿ ವಿಚಾರಣೆ-ಸು.ಕೋರ್ಟ್
ಡಿ.17ರಂದು ಕಂಚಿಶ್ರೀ ಬಂಧ ಮುಕ್ತಿಯ ಅರ್ಜಿ ವಿಚಾರಣೆ-ಸು.ಕೋರ್ಟ್
ಜೈಲಲ್ಲಿರುವ ಕಂಚಿಶ್ರೀಗಳ ನೋಡಲು ವೆಲ್ಲೂರಿಗೆ ಎನ್‌ಡಿಎ ನಿಯೋಗ
ಶ್ರೀಗಳ ಪರವಾಗಿ ಹಿರಿಯ ವಕೀಲ ಎಸ್.ಎಸ್.ನಾರಿಮನ್ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ(ಡಿ.15) ಪರಿಶೀಲಿಸಿದ, ಆರ್.ಸಿ.ಲಾಹೋಟಿ ನೇತೃತ್ವದ ತ್ರಿಸದಸ್ಯ ಪೀಠ ಶುಕ್ರವಾರ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.
ಜಾಮೀನು ಅರ್ಜಿಯನ್ನು ಡಿ.8 ರಂದು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ್ದನ್ನು ಪ್ರಶ್ನಿಸಿ, ಕಂಚಿಶ್ರೀಗಳು ಸುಪ್ರಿಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನವೆಂಬರ್ 11 ರಿಂದ ಶ್ರೀಗಳು ಪೋಲೀಸ್ ಬಂಧನದಲ್ಲಿದ್ದಾರೆ.
ಶ್ರೀಗಳಿಗೆ ಜಾಮೀನು ಕೋರಿ ಹಾಗೂ ಪ್ರಕರಣವನ್ನು ತಮಿಳುನಾಡು ಪೋಲೀಸರಿಂದ, ಸಿಬಿಐಗೆ ಹಸ್ತಾಂತರಿಸ ಬೇಕೆಂದು ಸಲ್ಲಿಸಲಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿತ್ತು.
ಎನ್‌ಡಿಎ ಭೇಟಿ: ವೆಲ್ಲೂರು ಜೈಲಿನಲ್ಲಿರುವ ಶ್ರೀಗಳನ್ನು ಭೇಟಿಯಾಗಲು ಆರು ಸದಸ್ಯರ ಎನ್‌ಡಿಎ ನಿಯೋಗಕ್ಕೆ ತಮಿಳುನಾಡು ಸರಕಾರ ಅನುಮತಿ ನೀಡಿದೆ. ಬಿಜೆಪಿಯ ಬಲಬೀರ್ ಸಿಂಗ್ ಪುಂಜ್, ರಾಸಾ ಸಿಂಗ್ ರಾವತ್, ಜಯಬೆಹನ್ ತಾಕ್ಕರ್, ಶಿವಸೇನೆಯ ಚಂದ್ರಕಾಂತ್ ಖರೆ, ಬಿಜು ಜನತಾದಳದ ಬಿ.ಜೆ. ಪಾಂಡ, ತೃಣಮೂಲ ಕಾಂಗ್ರೆಸ್‌ನ ದಿನೇಶ್ ತ್ರಿವೇದಿ ನಿಯೋಗದಲ್ಲಿದ್ದಾರೆ.
ಎನ್‌ಡಿಎ ನಿಯೋಗವು ಇದೇ ಸಂದರ್ಭದಲ್ಲಿ ಕಾಂಚೀಪುರಂನ ಕಿರಿಯ ಆಚಾರ್ಯ ವಿಜಯೇಂದ್ರ ಸರಸ್ವತಿಯವರನ್ನು ಸಹ ಭೇಟಿ ಮಾಡಲಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications