ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಮನೆ ಮುಂದೆ ಬಿಜೆಪಿ ಪ್ರತಿಭಟನೆ
ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಮನೆ ಮುಂದೆ ಬಿಜೆಪಿ ಪ್ರತಿಭಟನೆ
ಬಿಜೆಪಿ ನಾಯಕರಿಂದ ‘ಹಳ್ಳಿ ಮನೆ’ ಊಟ ತಿಂದು ಧರಣಿ ಮುಂದುವರಿಕೆ
ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಹಳದಿ ಪಡಿತರ ಚೀಟಿ ವಿತರಣೆ, ರೈತರ ಪಂಪ್‌ಸೆಟ್‌ಗಳಿಗೆ 12 ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆ ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ನಡೆಸಲಾದ ಧರಣಿಯಲ್ಲಿ ಬಿಜೆಪಿ ಶಾಸಕರು ಮುಖ್ಯಮಂತ್ರಿ ಧರ್ಮಸಿಂಗ್‌ಗೆ ಧಿಕ್ಕಾರ ಕೂಗಿದರು.
ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಧರ್ಮಸಿಂಗ್ ನೀಡಿದ ಲಿಖಿತ ಹೇಳಿಕೆಗಳಿಂದ ಬಿಜೆಪಿ ನಾಯಕರು ತೃಪ್ತರಾಗಲಿಲ್ಲ. ಧರಣಿ ಮುಂದುವರೆಸಿದ 60 ಶಾಸಕರು, 9 ವಿಧಾನ ಪರಿಷತ್ ಸದಸ್ಯರನ್ನು ಪೋಲೀಸರು ಬಂಧಿಸಿದರು.
ಮುಖ್ಯಮಂತ್ರಿ ನಿವಾಸದ ಮುಂದೆ ಧರಣಿಗಾಗಿ ಶಾಮಿಯಾನ ಹಾಕಲು ತಡೆದ ಪಿಎಸ್‌ಐಗೆ ಬಿಜೆಪಿ ಶಾಸಕರು ಥಳಿಸಿದರು. ಹಸಿವಿನಿಂದ ತತ್ತರಿಸಿದ ಬಿಜೆಪಿ ಶಾಸಕರು ಮೊದಲು ಕಡೆಲೆಕಾಯಿ, ಬಿಸ್ಕತ್ ತಿಂದು ಹಸಿವು ನೀಗಿಸಿಕೊಂಡರು. ನಂತರ ಮಧ್ಯಾಹ್ನ ‘ಹಳ್ಳಿ ಮನೆ’ಯಿಂದ ಊಟದ ಸರಬರಾಜು ಆಯಿತು. ಧರಣಿಯಲ್ಲಿ ಬಿಜೆಪಿ ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತಿತರರು ಪಾಲ್ಗೊಂಡಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications