ಪರಮೇಶ್ವರ್, ತಮ್ಮಣ್ಣ ಬೆಂಬಲಿಗರಿಂದ ಕೆಪಿಸಿಸಿ ಕಚೇರಿ ಮುಂದೆ ಗದ್ದಲ
ಪರಮೇಶ್ವರ್, ತಮ್ಮಣ್ಣ ಬೆಂಬಲಿಗರಿಂದ ಕೆಪಿಸಿಸಿ ಕಚೇರಿ ಮುಂದೆ ಗದ್ದಲ
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್‌ನಲ್ಲಿ ಅಸಮಾಧಾನ, ಪೂಜಾರಿಯಿಂದ ಶಿಸ್ತುಕ್ರಮದ ಎಚ್ಚರಿಕೆ
ಸಚಿವ ಸ್ಥಾನ ನೀಡದೇ ನಮ್ಮ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಅವರ ಬೆಂಬಲಿಗರು, ಮುಖ್ಯಮಂತ್ರಿ ಧರ್ಮಸಿಂಗ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಸ್ಥಳಕ್ಕೆ ತೆರಳಿ ಬೆಂಬಲಿಗರ ಮನವೊಲಿಸಲು ಪ್ರಯತ್ನಿಸಿದರು. ಮಂತ್ರಿ ಮಂಡಲದ ಮುಂದಿನ ವಿಸ್ತರಣೆಯಲ್ಲಿ ನ್ಯಾಯ ಒದಗಿಸಲಾಗುವುದು, ಪ್ರತಿಭಟನೆಯನ್ನು ಕೈಬಿಡದಿದ್ದರೆ ಶಿಸ್ತುಕ್ರಮ ಜರುಗಿಸುವುದಾಗಿ ಪೂಜಾರಿ ಎಚ್ಚರಿಸಿದರು.
ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ದಾವಣಗೆರೆಯಲ್ಲಿ ಅವರ ಬೆಂಬಲಿಗರು ದೂರಿದ್ದಾರೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎನ್ನುವ ಕೂಗೂ ಕೇಳಿ ಬರುತ್ತಿದೆ.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications