ಪಂಜಾಬ್‌ನಲ್ಲಿ ರೈಲುಗಳ ಮುಖಾಮುಖಿ ಡಿಕ್ಕಿ- ದುರಂತದಲ್ಲಿ 34 ಸಾವು
ಪಂಜಾಬ್‌ನಲ್ಲಿ ರೈಲುಗಳ ಮುಖಾಮುಖಿ ಡಿಕ್ಕಿ- ದುರಂತದಲ್ಲಿ 34 ಸಾವು
ರೈಲ್ವೆ ಅಪಘಾತದ ತನಿಖೆಗೆ ಸಚಿವ ಲಾಲೂ ಪ್ರಸಾದ್ ಯಾದವ್ ಆದೇಶ
ಜಮ್ಮುವಿನಿಂದ ಆಹ್ಮದಾಬಾದ್‌ಗೆ ತೆರಳುತ್ತಿದ್ದ ಜಮ್ಮು-ಆಹ್ಮದಾಬಾದ್ ಎಕ್ಸ್‌ಪ್ರೆಸ್ ಮತ್ತು ಜಲಂಧರ್‌ನಿಂದ ಪಥಣ್‌ಕೊಟ್‌ಗೆ ತೆರಳುತ್ತಿದ್ದ ಜಲಂಧರ್ ಪಥಣ್‌ಕೊಟ್ ಡಿಸೇಲ್ ಮಲ್ಟಿಪಲ್ ಘಟಕ(ಡಿಎಂಯು) ರೈಲಿನ ನಡುವೆ ಮಿರ್ಥಾಲ ಮತ್ತು ಬಂಗಾರ್ ರೈಲ್ವೆ ನಿಲ್ದಾಣದ ಬಳಿ ಡಿಕ್ಕಿ ಸಂಭವಿಸಿದೆ.
ರೈಲಿನ ನಾಲ್ಕು ಭೋಗಿಗಳಲ್ಲಿನ ತಾಂತ್ರಿಕ ದೋಷವೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸ್ಥಳಕ್ಕೆ ತೆರಳಿ, ಅಗತ್ಯ ಏರ್ಪಾಡಿಗೆ ಮುಂದಾಗಿದ್ದಾರೆ. ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾಧವ್, ಈ ಘಟನೆ ಬಗೆಗೆ ತನಿಖೆ ನಡೆಸಲು ಆದೇಶಿಸಿದ್ದಾರೆ.
ಸಹಾಯವಾಣಿ: ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ದೆಹಲಿ: 01123341074, 01123344128, 01123344128,
ಜಲಂಧರ್: 01812456672, 01812456240,
ಆಹ್ಮದಾಬಾದ್: 0792213344,22161313
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications