ನೃತ್ಯಕಲಾಪರಿಷತ್‌ಬೆಳ್ಳಿಹಬ್ಬಪ್ರಯುಕ್ತ ಡಿ.15ರಿಂದ ‘ನೃತ್ಯಸಮ್ಮೇಳನ’
ನೃತ್ಯಕಲಾಪರಿಷತ್‌ಬೆಳ್ಳಿಹಬ್ಬಪ್ರಯುಕ್ತ ಡಿ.15ರಿಂದ ‘ನೃತ್ಯಸಮ್ಮೇಳನ’
ಸಮ್ಮೇನಾಧ್ಯಕ್ಷೆ ಜಯಲಕ್ಷ್ಮೀ ಆಳ್ವರಿಗೆ ‘ನೃತ್ಯಕಲಾ ಶಿರೋಮಣಿ’ ಬಿರುದು
ಈ ರಜತ ಮಹೋತ್ಸವದ ಸಂದರ್ಭದಲ್ಲಿ ವಿಚಾರ ಸಂಕಿರಣ, ನೃತ್ಯ, ಪ್ರಾತ್ಯಕ್ಷಿಕೆ ನಡೆಯಲಿದೆ. ವಿವಿಧ ನೃತ್ಯ ಕಲಾವಿದರಿಂದ ಭರತನಾಟ್ಯ, ಕೂಚಿಪುಡಿ, ಮೋಹಿನಿ ಆಟ್ಟಂ, ಕಥಕ್, ಕಥಕ್ಕಳಿ, ಶಾಸ್ತ್ರೀಯ ನೃತ್ಯರೂಪಕ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳನ್ನು ಪರಿಚಯಿಸಲಾಗುವುದು ಎಂದು ಬೆಳ್ಳಿ ಹಬ್ಬ ನೃತ್ಯ ಸಮ್ಮೇಳನಾ ಸಮಿತಿ ಸದಸ್ಯ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಕೆ.ವಿ.ಆರ್. ಠಾಗೂರ್, ಪರಿಷತ್ ಅಧ್ಯಕ್ಷೆ ಲೀಲಾ ರಾಮನಾಥನ್ ಹಾಗೂ ನೃತ್ಯ ಸಮ್ಮೇಳನ ಸದಸ್ಯ ಪದ್ಮಜಾ ಶ್ರೀನಿವಾಸ್ ತಿಳಿಸಿದ್ದಾರೆ.
ನೃತ್ಯ ಸಮ್ಮೇಳನದಲ್ಲಿ ಹಿರಿಯ ನೃತ್ಯ ಗುರು ಜಯಲಕ್ಷ್ಮೀ ಆಳ್ವ ಅವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಆಹ್ವಾನಿಸಲಾಗುವುದು ಮತ್ತು ಅವರಿಗೆ ‘ನೃತ್ಯಕಲಾ ಶಿರೋಮಣಿ’ ಬಿರುದು ನೀಡಿ ಸನ್ಮಾನಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications