ಏರ್‌ಟೆಲ್ ಮ್ಯಾಜಿಕ್- ನಿಮಗೆ ಬೇಕಾದ ಮಾಹಿತಿ ಅಂಗೈಯಲ್ಲಿ ಪ್ರತ್ಯಕ್ಷ
ಏರ್‌ಟೆಲ್ ಮ್ಯಾಜಿಕ್- ನಿಮಗೆ ಬೇಕಾದ ಮಾಹಿತಿ ಅಂಗೈಯಲ್ಲಿ ಪ್ರತ್ಯಕ್ಷ
4242 ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಿ, ವಿಳಾಸ ಹುಡುಕುವ ಕಷ್ಟ ಅವರಿಗೆ ಬಿಡಿ!
ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ಮಣಿಪಾಲ , ಉಡುಪಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಶಿವಮೊಗ್ಗ, ದಾವಣಗೆರೆ ಹಾಗೂ ವಿಜಾಪುರದಲ್ಲಿ ಸದ್ಯಕ್ಕೆ ಈ ಸೇವೆ ಲಭ್ಯ. ಹಂತ ಹಂತವಾಗಿ ಎಲ್ಲೆಡೆ ವಿಸ್ತರಿಸುವುದು ಹಾಗೂ ಕನ್ನಡ ಎಸ್‌ಎಂಎಸ್ ವ್ಯವಸ್ಥೆಯನ್ನು ಆರಂಭಿಸುವ ಉದ್ದೇಶವಿದೆ ಎಂದು ಏರ್‌ಟೆಲ್ ಸಂಸ್ಥೆ ತಿಳಿಸಿದೆ.
ಏರ್‌ಟೆಲ್‌ನ ಹೊಸ ಸೇವೆಯ ವಿಶೇಷತೆ ಹೀಗಿದೆ;
- ಪೊಲೀಸ್ ಠಾಣೆ, ಆಸ್ಪತ್ರೆ, ಆಂಬ್ಯುಲೆನ್ಸ್, ನೀರಿನ ಬಿಲ್ ಪಾವತಿಸುವ ಕೇಂದ್ರ, 24 ಗಂಟೆ ಸೇವೆ ಲಭ್ಯವಿರುವ ಔಷಧಿ ಅಂಗಡಿ, ಸಿನಿಮಾ ಮಂದಿರ, ಹೋಟೆಲ್, ಪಬ್, ಬಾರ್ ಮತ್ತಿತರ ಮಾಹಿತಿಯನ್ನು ಗ್ರಾಹಕರು ಪಡೆಯ ಬಹುದು.
- ಪೋಸ್ಟ್ ಪೇಯ್ಡ್ ಮತ್ತು ಫ್ರೀಪೇಯ್ಡ್ ಗ್ರಾಹಕರು ಅಗತ್ಯ ಮಾಹಿತಿಯನ್ನು ಎಸ್.ಎಂ.ಎಸ್ ಮೂಲಕ ಪಡೆಯ ಬಹುದು.
- ಹೊಸ ಸೇವೆ ಪಡೆದುಕೊಳ್ಳಲು ಗ್ರಾಹಕರು 4242 ಸಂಖ್ಯೆಗೆ ಸಂಕ್ಷಿಪ್ತ ಸಂದೇಶವನ್ನು ಎಸ್‌ಎಂಎಸ್ ಮೂಲಕ ನೀಡಿದಲ್ಲಿ ಮಾಹಿತಿ ದೊರೆಯಲಿದೆ. ಪ್ರತಿ ಪ್ರಶ್ನೆಗೆ 3 ರೂ. ದರ ವಿಧಿಸಲಾಗಿದೆ.
- ಈ ಸೇವೆಯಲ್ಲಿ ಬಳಸಲಾಗುವ ಎಸ್‌ಎಂಎಸ್‌ನ ಸಂಕೇತಾಕ್ಷರಗಳು ನಿಮ್ಮ ನೆನಪಲ್ಲಿರಲಿ. ಅವುಗಳೆಂದರೇ, POL- police stations, HOS- hospitals, AMB- ambulances, WATERBILL- Water bill payment centres, MED- 24 hour pharmacies, ATM- ATMs, CINE- Cinema Halls, RES- restaurants, PUB- pubs and bars.
ಮುಖಪುಟ / ವಾರ್ತೆಗಳು












Click it and Unblock the Notifications