ಧರ್ಮಸಿಂಗ್ ಸರಕಾರದಿಂದ ಟ್ರಾನ್ಸ್‌ಫರ್ ಬಿಜಿನೆಸ್-ಶಂಕರಮೂರ್ತಿ
ಧರ್ಮಸಿಂಗ್ ಸರಕಾರದಿಂದ ಟ್ರಾನ್ಸ್‌ಫರ್ ಬಿಜಿನೆಸ್-ಶಂಕರಮೂರ್ತಿ
ಬಿಜೆಪಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರನ್ನು ಕಡೆಗಣಿಸಿಲ್ಲ
ಶುಕ್ರವಾರ(ಡಿ.10) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರಕಾರ ವರ್ಗಾವಣೆ ಪ್ರಕ್ರಿಯೆಯಲ್ಲಿ ಲೂಟಿ ಮಾಡುತ್ತಿದೆ. ಬೃಹತ್ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಕೆಲವು ಶಾಸಕರು ವರ್ಗಾವಣೆ ಮಾಡಿಸುವುದನ್ನೇ ವೃತ್ತಿಯಾಗಿ ಸ್ವೀಕರಿಸಿದ್ದಾರೆ ಎಂದರು.
ಕಳೆದ ಆರು ತಿಂಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದೆ. ಸರಕಾರ ಜಾಗೃತವಾಗಬೇಕು, ಅಲ್ಲದೇ ಕೇಂದ್ರದ ಮೇಲೆ ಒತ್ತಡ ತಂದು ನೆನೆಗುದಿಗೆ ಬಿದ್ದಿರುವ ರಾಜ್ಯದ ಯೋಜನೆಗಳಿಗೆ ಚಾಲನೆ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಬಂಗಾರಪ್ಪನವರನ್ನು ಕಡೆಗಣಿಸಿಲ್ಲ : ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪಕ್ಷದ ಬಗೆಗೆ ಎತ್ತಿರುವ ಅಪಸ್ವರಗಳ ಬಗೆಗೆ ಸುದ್ದಿಗಾರರು ಪ್ರಶ್ನಿಸಿದಾಗ, ಅವರಿಗೆ ಪಕ್ಷದಲ್ಲಿ ಒಳ್ಳೆಯ ಅವಕಾಶ ನೀಡಲಾಗಿದೆ. ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಅವರಿಗೆ ಪ್ರಾತಿನಿಧ್ಯ ಕಲ್ಪಿಸಲಾಗಿದೆ. ಯಾವುದೇ ಪಕ್ಷಪಾತದ ಧೋರಣೆಯನ್ನು ಬಿಜೆಪಿ ಅನುಸರಿಸಿಲ್ಲ. ಯಾರು ಬೇಕಾದರೂ ತೀಕ್ಷ್ಣ ಹೇಳಿಕೆಗಳನ್ನು ನೀಡ ಬಹುದು. ಅದನ್ನು ಪಕ್ಷದ ವೇದಿಕೆ ಚರ್ಚಿಸುತ್ತದೆ ಎಂದು ಶಂಕರಮೂರ್ತಿ ಅಭಿಪ್ರಾಯಪಟ್ಟರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications