ಸರಕಾರಿ ಅಧಿಕಾರಿಗಳ ಭ್ರಷ್ಟತೆ ಕಡಿವಾಣಕ್ಕೆ ಮಡಿಕೇರಿಯಲ್ಲಿ ರೈತಸಂಘ

ಸರಕಾರಿ ಅಧಿಕಾರಿಗಳ ಭ್ರಷ್ಟತೆ ಕಡಿವಾಣಕ್ಕೆ ಮಡಿಕೇರಿಯಲ್ಲಿ ರೈತಸಂಘ
ಅಧಿಕಾರಿಗಳ ಹಣದಾಹ, ರೈತರ ಬಗೆಗಿನ ಅಸಡ್ಡೆ ವಿರುದ್ಧ ನಮ್ಮ ಹೋರಾಟ

ಮಡಿಕೇರಿ : ಎಲ್ಲೆಲ್ಲೂ ಹಣದ್ದೇ ಮಾತು. ಲಂಚ ಬಿಚ್ಚದಿದ್ದರೇ ನಿಮ್ಮನ್ನು ಇಲ್ಲಿ ಕಣ್ಣೆತ್ತಿ ಸಹಾ ನೋಡುವುದಿಲ್ಲ. ಆಯಾ ಕೆಲಸಕ್ಕಿಷ್ಟು ಎನ್ನುವಂತೆ ಇಲ್ಲಿ ಮಾಮೂಲು ಫಿಕ್ಸ್‌ ಆಗಿರುತ್ತದೆ. ಪುಣ್ಯಕ್ಕೆ ದರ ಪಟ್ಟಿಯ ಬೋರ್ಡ್‌ ಇರುವುದಿಲ್ಲ ಎನ್ನುವುದನ್ನು ಬಿಟ್ಟರೆ, ಯಾವುದೇ ಎಗ್ಗುಸಿಗ್ಗಿಲ್ಲದೇ ಲಂಚದ ವ್ಯವಹಾರ ನಿರಾತಂಕವಾಗಿ ಸಾಗುತ್ತದೆ. ಇದು ಸರಕಾರಿ ಕಚೇರಿಗಳ ಕತೆ!

ಲೋಕಾಯುಕ್ತ ಎನ್ನುವುದು ಸತ್ತ ಹಾವು. ಈ ನಿಟ್ಟಿನಲ್ಲಿ ತಮ್ಮ ಸಮಸ್ಯೆಗಳ ಪರಿಹಾರದ ಹೊಸ ಪ್ರಯೋಗಕ್ಕೆ ಮಡಿಕೇರಿಯಲ್ಲಿ ಚಾಲನೆ ದೊರೆತಿದೆ. ಆಡಳಿತ ಯಂತ್ರದ ಭ್ರಷ್ಟತೆಯನ್ನು ವಿರೋಧಿಸಲು ಈ ಭಾಗದ ರೈತರು ಹೋರಾಟಕ್ಕೆ ಸಜ್ಜಾಗಿದ್ದಾರೆ.

ಭಾಗಮಂಡಲ, ಚಿತ್ತಿಮನಿ, ಚಿರಂಬನೆ ಮತ್ತಿತರ ಮಡಿಕೇರಿ ವ್ಯಾಪ್ತಿಯ ರೈತರು ಸರಕಾರಿ ಕಚೇರಿಗಳಲ್ಲಿನ ಭ್ರಷ್ಟತೆಗೆ ಕಡಿವಾಣ ಹಾಕಲು ಸಂಘವೊಂದನ್ನು ರಚಿಸಿದ್ದಾರೆ. ವಿಶ್ವನಾಥ್‌ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳ ಧನದಾಹದಿಂದ ಈ ಭಾಗದ ಜನ ಜಿಗುಪ್ಸೆಗೊಂಡಿದ್ದಾರೆ. ಈ ನಿಟ್ಟಿನಲ್ಲಿ ರೈತರಿಗೆ ಹಾಗೂ ಜನಸಾಮಾನ್ಯರಿಗೆ ನ್ಯಾಯ ದೊರಕಿಸುವ ಉದ್ದೇಶದಿಂದ ಸಂಘ ಅಸ್ತಿತ್ವಕ್ಕೆ ಬಂದಿದೆ ಎಂದರು.

ನಮ್ಮ ಸಂಘಟನೆಗೆ ಕಾವೇರಿ ಸೇನೆ ಸಹಾ ಬೆಂಬಲಿಸಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ನಮ್ಮ ಉದ್ದೇಶ.

ಲೋಕಾಯುಕ್ತಕ್ಕೆ ಸರಕಾರ ಶಕ್ತಿ ತುಂಬ ಬೇಕು. ಹೆಚ್ಚಿನ ಅಧಿಕಾರಗಳನ್ನು ನೀಡಬೇಕು. ಅಧಿಕಾರಿಗಳನ್ನು ಕೇವಲ ಬೆದರಿಸಿದರೆ ಫಲವಿಲ್ಲ. ಅಪರಾಧಕ್ಕೆ ತಕ್ಕ ಶಿಕ್ಷೆಯಾಗಬೇಕು ಎಂದು ವಿಶ್ವನಾಥ್‌ ಅಭಿಪ್ರಾಯಪಟ್ಟಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+