ಡಿ.11: ಎವರ್‌ಗ್ರೀನ್ ಹೀರೋ ದೇವಾನಂದ್ ಸಂಗೀತ ರಸಸಂಜೆ

ಬೆಂಗಳೂರು : ದೇವಾನಂದ್- ಈ ಹೆಸರೇ ಕೇಳುಗರ ಮನದಲ್ಲಿ ಮಿಂಚು ತರುತ್ತದೆ. ಹಿಂದಿ ಚಿತ್ರರಸಿಕರಲ್ಲಿ ಮಾತ್ರವಲ್ಲ, ಪ್ರತಿಯಾಬ್ಬ ಚಿತ್ರರಸಿಕರ ಪಾಲಿಗೂ ದೇವಾನಂದ್ ಅಂದರೆ ರೋಮಾಂಚನ. ವಯಸ್ಸಾದ ಮೇಲೆ ಆಕರ್ಷಣೆ ಚಿತ್ರರಂಗದಲ್ಲಿ ಬದಿಗೆ ಸರಿಯುತ್ತದೆ. ಆದರೆ ಎಲ್ಲರಂತಲ್ಲ ದೇವಾನಂದ್! ಚಿರಯುವಕ ದೇವಾನಂದ್ ನೆನಪುಗಳು ಕಾಡುತ್ತಿವೆಯೇ, ಆಗಿದ್ದರೆ ನಗರದ ಚಿತ್ರಪ್ರೇಮಿಗಳಿಗೆ ಅದರಲ್ಲೂ ದೇವಾನಂದ್ ಅಭಿಮಾನಿಗಳಿಗೊಂದು ಸಿಹಿಸಿಹಿಯಾದ ಸಮಾಚಾರ ಇಲ್ಲಿದೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ (ಡಿ.11) ಸಂಜೆ 6.15 ಕ್ಕೆ- 'ಲೆಜೆಂಡ್ಸ್ ’ ಶೀರ್ಷಿಕೆಯಲ್ಲಿ ದೇವಾನಂದ್ ಸ್ಪೆಷಲ್ ಸಂಗೀತ ರಸಸಂಜೆ ಕಾರ್ಯಕ್ರಮ ಏರ್ಪಾಡಾಗಿದೆ. ಬೆಳಕು ಶಿಶು ನಿವಾಸ(ಅನಾಥ ಮತ್ತು ನಿರಾಶ್ರಿತರ ವಸತಿ ಶಾಲೆ)ಕ್ಕೆ ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಬೆಂಗಳೂರಿನ ರಮ್ಯ ಕಲ್ಚರಲ್ ಅಕಾಡೆಮಿ ಏರ್ಪಡಿಸಿದೆ.
ಎಸ್.ಸುನೀತ, ದಿವ್ಯ ರಾಘವನ್, ಸಿಂಚನ್ ದೀಕ್ಷಿತ್, ಶೀಲು ಮೆಹ್ತಾ, ಡಾ.ಸಲೀಂ, ಜಿಂಪೆಟ್ಸ್ ಮೋಹನ್, ಆರ್.ಶ್ರೀನಾಥ್, ಸಂಜಯ್ ಸಿಂಗ್, ಸುನೀಲ್ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುತ್ತಿದ್ದಾರೆ.
ಪ್ರವೇಶ ದರ- ರೂ.200, ರೂ.100 ಮತ್ತು ರೂ.50.
ಟಿಕೇಟ್‌ಗಳು ಕೆಳಕಂಡ ಸ್ಥಳಗಳಲ್ಲಿ ಲಭ್ಯ:
BUTTER SPONGE BAKERY (Basavanagudi & Indiranagar)
CALYPSO (Jayanagar),
CANARA UNION (Malleswaram)
TALKING HEADZ SALOON (Brigade Road)
RAVINDRA KALAKSHETRA CANTEEN, (Basaveswaravangara), Ph. 23227601
(ಇನ್ಫೋ ವಾರ್ತೆ)












Click it and Unblock the Notifications