ಸಂಪುಟ ವಿಸ್ತರಣೆಗೆ ಡಿ.13 ಗಡುವು ; ಇಲ್ಲದಿದ್ದರೆ ಆಗೋದೇ ಬೇರೆ?
ಸಂಪುಟ ವಿಸ್ತರಣೆಗೆ ಡಿ.13 ಗಡುವು ; ಇಲ್ಲದಿದ್ದರೆ ಆಗೋದೇ ಬೇರೆ?
ಕುಮಾರ್‌ಸ್ವಾಮಿ ನಾಯಕತ್ವದಲ್ಲಿ ಜೆಡಿಎಸ್ ಶಾಸಕರ ರಹಸ್ಯ ಸಮಾಲೋಚನೆ
ಕಾಂಗ್ರೆಸ್ ಮೇಲೆ ಒತ್ತಡ ಹಾಕಲು ಯತ್ನಿಸುತ್ತಿರುವ ಜೆಡಿಎಸ್, ಡಿ.13 ರಂದೂ ಸಂಪುಟ ವಿಸ್ತರಣೆಯಾಗದಿದ್ದರೆ ಮುಂದಿನ ದಾರಿ ಹಿಡಿಯಲು ತೀರ್ಮಾನಿಸಿದೆ. ಅಲ್ಲಿಯವರೆಗೆ ಕಾದು ನೋಡುವ ನೀತಿ ಅನುಸರಿಸಿರುವ ಜೆಡಿಎಸ್ ಶಾಸಕರು, ಬಿಜೆಪಿ ಜೊತೆ ಕೈಜೋಡಿಸುವ ಬಗೆಗೆ ಸಹ ಚಿಂತನೆ ನಡೆಸಿದ್ದಾರೆ. ಯಾರ ಸಂಪರ್ಕಕ್ಕೂ ಸಿಲುಕದೇ ಜೆಡಿಎಸ್ ಶಾಸಕರು, ಕುಮಾರ್‌ಸ್ವಾಮಿ ನಾಯಕತ್ವದಲ್ಲಿ ರಹಸ್ಯ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿರುವ ಮುಖ್ಯಮಂತ್ರಿ ಧರ್ಮಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.15 ರೊಳಗೆ ಸಂಪುಟ ವಿಸ್ತರಿಸಲಾಗುವುದು. ಕಾಂಗ್ರೆಸ್‌ನಿಂದ ಒಂಬತ್ತು ಮಂದಿಗೆ ಮಾತ್ರ ಸಚಿವ ಸ್ಥಾನ ನೀಡಿ, ಎರಡು ಸ್ಥಾನಗಳನ್ನು ಖಾಲಿ ಇಡುವ ಯೋಚನೆ ಇದೆ. ಜೆಡಿಎಸ್‌ನಿಂದ ಹನ್ನೊಂದು ಮಂದಿಗೆ ಸಚಿವ ಸ್ಥಾನ ನೀಡಲಾಗುವುದು ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications