ಸಚಿವ ಸ್ಥಾನವೇ ಬೇಕು: ದಿಲ್ಲೀಲಿ ಡಿ.ಕೆ.ಶಿವಕುಮಾರ್ ಉಡದ ಪಟ್ಟು
ಸಚಿವ ಸ್ಥಾನವೇ ಬೇಕು: ದಿಲ್ಲೀಲಿ ಡಿ.ಕೆ.ಶಿವಕುಮಾರ್ ಉಡದ ಪಟ್ಟು
ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನವನ್ನು ನಿವೃತ್ತ ರಾಜಕಾರಣಿಗಳಿಗೆ ಕೊಡಲಿ
ಮಾಜಿ ಮುಖ್ಯಮಂತ್ರಿ ಹಾಗೂ ಮಹಾರಾಷ್ಟ್ರ ರಾಜ್ಯಪಾಲರಾದ ಎಸ್ಸೆಂ.ಕೃಷ್ಣರ ಕಟ್ಟಾ ಬೆಂಬಲಿಗರಲ್ಲೊಬ್ಬರಾದ ಶಿವಕುಮಾರ್‌ಗೆ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆನ್ನುವ ವದಂತಿ ರಾಜಕೀಯ ವಲಯಗಳಲ್ಲಿ ದಟ್ಟವಾಗಿತ್ತು . ಈ ಕುರಿತು ಪ್ರತಿಕ್ರಿಯಿಸಿರುವ ಶಿವಕುಮಾರ್- ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನವನ್ನು ಯಾರಾದರೂ ನಿವೃತ್ತ ರಾಜಕಾರಣಿಗಳಿಗೆ (ಶಾಸಕರು ಅಥವಾ ಸಂಸದರು ಅಲ್ಲದವರಿಗೆ) ನೀಡಲಿ ಎಂದು ವ್ಯಂಗ್ಯವಾಗಿ ನುಡಿದಿದ್ದಾರೆ.
ಸಚಿವ ಸ್ಥಾನಕ್ಕೆ ಬದಲಿಯಾಗಿ ಬೇರೆ ಯಾವುದೇ ಸ್ಥಾನ ಒಪ್ಪಿಕೊಳ್ಳುವುದಿಲ್ಲ . ಒಂದುವೇಳೆ ಸಚಿವ ಸ್ಥಾನ ದೊರೆಯದಿದ್ದಲ್ಲಿ ಸಾತನೂರಿನಲ್ಲೇ ಉಳಿದು ಕ್ಷೇತ್ರದ ಜನತೆಯ ಸೇವೆ ಮಾಡುವುದಾಗಿ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಶಿವಕುಮಾರ್ ದೆಹಲಿಯಲ್ಲಿದ್ದು , ಕೇಂದ್ರದ ಹಿರಿಯ ಕಾಂಗ್ರೆಸ್ ನಾಯಕರ ನಿಕಟ ಸಂಪರ್ಕದಲ್ಲಿದ್ದಾರೆ. ಸಂಪುಟದಲ್ಲಿ ಸ್ಥಾನ ಪಡೆಯಲು ಶಿವಕುಮಾರ್ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಆದರೆ ಶಿವಕುಮಾರ್ ಸೇರ್ಪಡೆಯನ್ನು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟವಾಗಿ ವಿರೋಧಿಸಿರುವುದು ಮುಖ್ಯಮಂತ್ರಿ ಧರ್ಮಸಿಂಗ್‌ರ ನೆಮ್ಮದಿ ಭಂಗಕ್ಕೆ ಕಾರಣವಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications