ರಸ್ತೆ ಅಭಿವೃದ್ಧಿ:1500 ಕೋಟಿ ಸಾಲಕ್ಕೆವಿಶ್ವಬ್ಯಾಂಕ್‌ಗೆ ರಾಜ್ಯದ ಮೊರೆ
ರಸ್ತೆ ಅಭಿವೃದ್ಧಿ:1500 ಕೋಟಿ ಸಾಲಕ್ಕೆವಿಶ್ವಬ್ಯಾಂಕ್‌ಗೆ ರಾಜ್ಯದ ಮೊರೆ
ರಾಜ್ಯದ 27 ಜಿಲ್ಲೆಗಳಲ್ಲಿನ ರಸ್ತೆಗಳ ಮೇಲ್ದರ್ಜೆಗೆ ಯೋಜನೆ
ವಿಶ್ವಬ್ಯಾಂಕ್ ನೆರವನ್ನು ಪಡೆಯುವ ಮೂಲಕ ರಾಜ್ಯದ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಸರ್ಕಾರ ತೀರ್ಮಾನಿಸಿದೆ. ನೆರವನ್ನು ಕೋರುವ ಪ್ರಸ್ತಾವನೆ ಇನ್ನೊಂದು ತಿಂಗಳಲ್ಲಿ ಸಿದ್ಧವಾಗಲಿದ್ದು , ಸಿದ್ಧವಾದ ಕೂಡಲೇ ಪ್ರಸ್ತಾವನೆಯನ್ನು ವಿಶ್ವಬ್ಯಾಂಕ್‌ಗೆ ಕಳುಹಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ರಸ್ತೆಗಳಿಗೆ ಹಾನಿ ಉಂಟುಮಾಡುತ್ತಿರುವ ಅಧಿಕ ಸರಕು ತುಂಬಿಕೊಂಡಿರುವ ಟ್ರಕ್‌ಗಳ ಹಾವಳಿಯ ಕುರಿತು ಚರ್ಚಿಸಲು ಉಪಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಶೀಘ್ರದಲ್ಲಿ ನಡೆಯುವ ಈ ಸಭೆಯಲ್ಲಿ ಸಾರಿಗೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ತಾವು ಭಾಗವಹಿಸುವುದಾಗಿ ರೇವಣ್ಣ ಹೇಳಿದರು.
ಅಧಿಕ ಸರಕು ಸಾಗಣೆಗೆ ಸಂಬಂಧಿಸಿದಂತೆ ಮಂಡ್ಯ, ಬಾಗಲಕೋಟೆ, ತುಮಕೂರು, ಬೆಳಗಾವಿ, ಆಸನ, ಮಂಗಳೂರು, ಕೊಪ್ಪಳ ಜಿಲ್ಲೆಗಳಲ್ಲಿ ಕೆಲವು ಟ್ರಕ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ರೇವಣ್ಣ ಹೇಳಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications