ಕುಪ್ಪಳ್ಳಿಯಲ್ಲಿ ಡಿ.29ರಂದು ರಸಋಷಿಗೆ ಶತಮಾನೋತ್ಸವ ನಮಸ್ಕಾರ
ಕುಪ್ಪಳ್ಳಿಯಲ್ಲಿ ಡಿ.29ರಂದು ರಸಋಷಿಗೆ ಶತಮಾನೋತ್ಸವ ನಮಸ್ಕಾರ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕುವೆಂಪು ಮಾದರಿ ಶಾಲೆಗಳ ಸ್ಥಾಪನೆ
ಬುಧವಾರ (ನ.8) ಕುವೆಂಪು ಜನ್ಮಶತಮಾನೋತ್ಸವ ಆಚರಣಾ ಸಮಿತಿಯ ಸಭೆ ನಡೆಯಿತು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಎನ್. ಧರ್ಮಸಿಂಗ್, ಸಮಾರೋಪ ಸಮಾರಂಭಕ್ಕೆ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಆಹ್ವಾನಿಸುವುದಾಗಿ ಹೇಳಿದರು.
ವರ್ಷವಿಡೀ ಕುವೆಂಪು ಕಾರ್ಯಕ್ರಮ ಆಚರಿಸಲು ಜನ್ಮಶತಮಾನೋತ್ಸವದ ಸಮಿತಿಯನ್ನು ತನ್ನ ಅಧಿಕಾರಾವಧಿಯಲ್ಲಿ ಎಸ್.ಎಂ.ಕೃಷ್ಣ ಸರಕಾರ ರಚಿಸಿತ್ತು. ಪ್ರಸ್ತುತ ಸಮಾರೋಪದ ಸಮಯ. ಕುಪ್ಪಳ್ಳಿಯಲ್ಲಿ ಬೃಹತ್ ಪ್ರಮಾಣದಲ್ಲಿ ಸಮಾರೋಪ ಸಮಾರಂಭ ನಡೆಸಲು ಉದ್ದೇಶಿಸಲಾಗಿದೆ ಎಂದು ಧರ್ಮಸಿಂಗ್ ತಿಳಿಸಿದರು.
ಕುವೆಂಪು ಹೆಸರಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಮಾದರಿ ಶಾಲೆಗಳನ್ನು ರೂಪಿಸಲಾಗುವುದು. ಅದೇ ರೀತಿ ಎಸ್.ನಿಜಲಿಂಗಪ್ಪ ನವರ ಹೆಸರಿನಲ್ಲಿ 30 ವಸತಿ ಶಾಲೆಗಳ ಸ್ಥಾಪಿಸಲಾಗುವುದು. ನಿಜಲಿಂಗಪ್ಪನವರ ಶತಮಾನೋತ್ಸವ ಆಚರಣೆಗೆ ಸರಕಾರ ಸಜ್ಜಾಗಿದೆ ಎಂದರು.
ಕಂದಾಯ ಸಚಿವ ಎಂ.ಪಿ. ಪ್ರಕಾಶ್ ಮಾತನಾಡಿ- ಕುವೆಂಪು ತಮ್ಮ ಬದುಕನ್ನು ಹಂಚಿಕೊಂಡ ಮೈಸೂರಿನಲ್ಲೂ ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಬಿ.ಎಲ್.ಶಂಕರ್, ವಾಟಾಳ್ ನಾಗರಾಜ್ ಹಾಗೂ ಸಮಿತಿಯ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications