ಕಂಚಿ ಶಂಕರಾಚಾರ್ಯರಿಗೆ ಜಾಮೀನು ಇಲ್ಲ - ಚೆನ್ನೈ ಹೈಕೋರ್ಟ್
ಕಂಚಿ ಶಂಕರಾಚಾರ್ಯರಿಗೆ ಜಾಮೀನು ಇಲ್ಲ - ಚೆನ್ನೈ ಹೈಕೋರ್ಟ್
ಶ್ರೀ ಶಂಕರಾಚಾರ್ಯ ಜಯೇಂದ್ರ ಸರಸ್ವತಿಯವರ ಎರಡನೇ ಪ್ರಯತ್ನಕ್ಕೂ ದಕ್ಕದ ಫಲ
ನ್ಯಾಯಮೂರ್ತಿ ಆರ್. ಬಾಲಸುಬ್ರಮಣ್ಯಂ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ವಿಚಾರಣೆಗಳನ್ನು ಆಲಿಸಿದ ನ್ಯಾಯಮೂರ್ತಿಗಳು, ಸಿಆರ್‌ಪಿಸಿ 439 ಹಾಗೂ 437ರ ಪ್ರಕಾರ ಶ್ರೀಗಳಿಗೆ ಜಾಮೀನು ನೀಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಕಂಚಿ ದೇವಸ್ಥಾನದ ನೌಕರ ಶಂಕರರಾಮನ್ ಕೊಲೆ ಆರೋಪದ ಹಿನ್ನೆಲೆಯಲ್ಲಿ ನ.11 ರಂದು ಶ್ರೀಗಳನ್ನು ಬಂಧಿಸಲಾಗಿತ್ತು. ನ.20 ರಂದು ಶ್ರೀಗಳ ಮೊದಲ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಮಾಡಿತ್ತು. ಮತ್ತೊಂದು ಹಲ್ಲೆ ಯತ್ನಕ್ಕೆ ಸಂಬಂಧಿಸಿದಂತೆ, ಕಾಂಚೀಪುರಂ ನ್ಯಾಯಾಲಯ ಶ್ರೀಗಳನ್ನು ಡಿ.10 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಮುಂದಿನ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications