ಕಂಚಿಶ್ರೀಗಳ ಧನುರ್‌ಮಾಸದ ಪೂಜೆಗೆ ಜೈಲಲ್ಲಿ ವ್ಯವಸ್ಥೆ ಕಲ್ಪಿಸಿ-ಉಮಾ

ಕಂಚಿಶ್ರೀಗಳ ಧನುರ್‌ಮಾಸದ ಪೂಜೆಗೆ ಜೈಲಲ್ಲಿ ವ್ಯವಸ್ಥೆ ಕಲ್ಪಿಸಿ-ಉಮಾ
ಕಂಚಿ ಪ್ರಕರಣದ ಬಗ್ಗೆ ಸೋನಿಯಾ ಮೌನ ಬಿಡಿಸಲಾಗದ ಒಗಟು

ಕಾಂಚೀಪುರಂ: ಧನುರ್‌ಮಾಸದ ಪೂಜೆಗೆ ಪೂರಕವಾಗುವಂತೆ ಕಂಚಿ ಶ್ರೀಗಳಿಗೆ, ಜೈಲಿನಲ್ಲಿ ಪೂಜಾ ಕಾರ್ಯಕ್ಕೆ ಅಗತ್ಯ ಸೌಲಭ್ಯಗಳ ಕಲ್ಪಿಸುವಂತೆ ತಮಿಳುನಾಡು ಸರಕಾರವನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಕೋರಿದ್ದಾರೆ.

ಮಂಗಳವಾರ ವೆಲ್ಲೂರು ಜೈಲಿನಲ್ಲಿರುವ ಶ್ರೀಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧನುರ್‌ ಮಾಸ ಡಿಸೆಂಬರ್‌ ತಿಂಗಳ ಮಧ್ಯದಲ್ಲಿ ಆರಂಭಗೊಳ್ಳುತ್ತಿದೆ. ಹಿಂದುಗಳಿಗೆ ಅದರಲ್ಲೂ ಸನ್ಯಾಸಿಗಳಿಗೆ ಈ ಅವಧಿ ಮಹತ್ವದ್ದಾಗಿದೆ ಎಂದರು.

ರಾಷ್ಟ್ರದಲ್ಲಿ ಕೋಲಾಹಲ ಎಬ್ಬಿಸಿರುವ ಕಂಚಿ ಶ್ರೀಗಳ ಪ್ರಕರಣದ ಬಗೆಗೆ ಕಾಂಗ್ರೆಸ್‌ ಮೌನವಹಿಸಿದೆ. ವಿದೇಶಿ ಮೂಲದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಗೆ, ನಮ್ಮ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳು ಅರ್ಥವಾಗಿಲ್ಲ. ಹೀಗಾಗಿ ಅವರು ಮೌನವಹಿಸಿದ್ದಾರೆ. ಅವರ ಮೌನ ದೊಡ್ಡ ಒಗಟಾಗಿದೆ ಎಂದು ಉಮಾಭಾರತಿ ಹೇಳಿದರು.

ಈ ನಡುವೆ ಕಂಚಿ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ಡಿ.10ಕ್ಕೆ ಮುಂದೂಡಲ್ಪಟ್ಟಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+