ದೇಸಿ ವೈದ್ಯದ ಒಳನೋಟಗಳ ‘ಸಚಿತ್ರ ಚರಕ ಸಂಹಿತೆ’ಯ ಅನಾವರಣ
ದೇಸಿ ವೈದ್ಯದ ಒಳನೋಟಗಳ ‘ಸಚಿತ್ರ ಚರಕ ಸಂಹಿತೆ’ಯ ಅನಾವರಣ
ಸಚಿತ್ರಚರಕ ಸಂಹಿತೆ ಪುಸ್ತಕದ ಬಗೆಗೆ ರಾಷ್ಟ್ರಪತಿ ಮೆಚ್ಚುಗೆ
ಮುನಿಯಲ್ ಆಯುರ್ವೇದ ಪ್ರಕಟಿಸಿರುವ ಈ ಪುಸ್ತಕವನ್ನು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಬಿಡುಗಡೆ ಮಾಡಲಾಗಿದೆ. ‘ನಾನು ಈ ಪುಸ್ತಕವನ್ನು ಓದಿದ್ದೇನೆ. ಇದೊಂದು ಉತ್ತಮ ಪುಸ್ತಕವಾಗಿದೆ. ಒಳ್ಳೆಯ ಆರೋಗ್ಯಕ್ಕೆ ಅಮೂಲ್ಯ ಟಿಪ್ಪಣಿಗಳು ಇಲ್ಲಿವೆ’ ಎಂದಿರುವ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ, ಮುನಿಯಾಲ್ ಆಯುರ್ವೇದದ ಛೇರ್ಮನ್ ಎಂ.ವಿ. ಶೆಟ್ಟಿಯವರನ್ನು ಅಭಿನಂದಿಸಿದ್ದಾರೆ.
ಸಚಿತ್ರ ಚರಕ ಸಂಹಿತೆ ಎನ್ನುವುದು ಇಂಗ್ಲಿಷ್ ಭಾಷೆಗೆ ಅನುವಾದಿಸಿರುವ ಮಹತ್ವದ ಕೃತಿಯಾಗಿದೆ. ಆಯುರ್ವೇದ ಶಾಸ್ತ್ರದಲ್ಲಿ 120 ವಿಭಾಗಗಳಿದ್ದು, 30 ವಿಷಯಗಳನ್ನು ಈ ಪುಸ್ತಕ ಒಳಗೊಂಡಿದೆ. ಸಂಸ್ಕೃತದ ಶ್ಲೋಕಗಳನ್ನು ಬೇರೆ ಪುಸ್ತಕಗಳಿಗಿಂತಲೂ ಸುಲಲಿತವಾಗಿ ಅರ್ಥವಾಗುವಂತೆ ಇಂಗ್ಲೀಷ್‌ಗೆ ಅನುವಾದಿಸಲಾಗಿದೆ. ಓದುವ ಕ್ರಿಯೆಯನ್ನು ಸುಲಭವಾಗಿಸಲು, ಅಗತ್ಯ ಚಿತ್ರ ಗಳನ್ನು ಪುಸ್ತಕದಲ್ಲಿ ಬಳಸಲಾಗಿದೆ.
ಪ್ರತಿ ಪದಕ್ಕೂ ಸೂಕ್ತ ಆಂಗ್ಲಪದವನ್ನು ಬಳಸಲಾಗಿದೆ. ಇದು ಆಯುರ್ವೇದ ಅಧ್ಯಯನದ ವಿದ್ಯಾರ್ಥಿಗಳಿಗೆ ನೆರವಾಗಲಿದ್ದು, ಜನ ಸಾಮಾನ್ಯರಿಗೂ ಉಪಯುಕ್ತ. ಹತ್ತು ಮಂದಿ ಆಯುರ್ವೇದ ಪ್ರೋಪೆಸರ್‌ಗಳು ಮತ್ತು ಹತ್ತು ಮಂದಿ ಪೋಸ್ಟ್ ಗ್ರಾಜುಯೇಟ್‌ಗಳ ಶ್ರಮ ಇಲ್ಲಿದೆ.
ಆಯುರ್ವೇದ ಭಂಡಾರ : 1940 ರಲ್ಲಿ ಆರಂಭಗೊಂಡ ಮುನಿಯಲ್ ಆಯುರ್ವೇದ, ಅಪರೂಪದ ಗಿಡಮೂಲಿಕೆಗಳ ಸಂಗ್ರಹ, ಸಂಶೋಧನೆ, ಆಯುರ್ವೇದ ಉದ್ಯಾನಗಳ ಅಭಿವೃದ್ದಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಅಲ್ಲದೇ ಗುಣಮಟ್ಟದ ಆಯುರ್ವೇದ ಔಷಧಿ ತಯಾರಿಕೆಗೆ ಮುಂದಾಗಿದೆ. ವಾಸಿಯಾಗದ ರೋಗಗಳಿಗೆ ಚಿಕಿತ್ಸೆಯನ್ನು ಅಭಿವೃದ್ಧಿ ಪಡಿಸುತ್ತಿದೆ.
ಎಲ್ಲಾ ಸೌಲಭ್ಯಗಳುಳ್ಳ ಆಯುರ್ವೇದದ ಆಸ್ಪತ್ರೆಯನ್ನು, ಆಯುರ್ವೇದಕ್ಕೆ ಸಂಬಂಧಿಸಿದ ಪದವಿ ನಂತರದ ಹಾಗೂ ಪದವಿ ಪೂರ್ವ ಕೋರ್ಸುಗಳನ್ನು ಮುನಿಯಲ್ ಆಯುರ್ವೇದ ನಡೆಸುತ್ತಿದೆ.
ರಾಷ್ಟ್ರದ ವೈವಿಧ್ಯತೆಗಳ ಪರಿಚಯಿಸಲು ಪುಸ್ತಕ ಪ್ರಕಟಣೆಯಲ್ಲಿ ಆಸಕ್ತಿವಹಿಸಿದ್ದು, ಯೋಗಾ, ವಾಸ್ತು ಶಾಸ್ತ್ರ, ಶಿಲ್ಪ ಶಾಸ್ತ್ರ, ಪಾಕ ಶಾಸ್ತ್ರ, ವ್ಯವಸಾಯ ಶಾಸ್ತ್ರ, ಮಾಯಾ ಶಾಸ್ತ್ರ, ನಗರ ನಿರ್ಮಾಣ ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ, ಖಗೋಳ ಶಾಸ್ತ್ರ, ಗಣಿತ ಶಾಸ್ತ್ರ, ಮತ್ತಿತರ ಪುಸ್ತಕಗಳನ್ನು ಹೊರ ತಂದಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications