ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ- ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅತೃಪ್ತಿ
ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ- ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅತೃಪ್ತಿ
ನನಗೆ ಗೌರವ ಕೊಡದಿದ್ದರೆ, ಮುಂದಿನ ಹಾದಿ ನೋಡಿಕೊಳ್ಳುತ್ತೇನೆ- ಬಂಗಾರಪ್ಪ
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ದಕ್ಕದಿರುವ ಬಗೆಗೆ ಅವರಿಗೆ ಅಸಮಧಾನವಿದೆ. ಬಹುದಿನಗಳ ನಂತರ ಮೊದಲ ಬಾರಿಗೆ ಬಿಜೆಪಿ ಬಗೆಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ, ತೀವ್ರ ಕುತೂಹಲ ಕೆರಳಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಬಂಗಾರಪ್ಪ ಬಿಜೆಪಿ ಬಿಡುವ ಬಗೆಗೆ ಅಪರೋಕ್ಷವಾಗಿ ಸೂಚಿಸಿದ್ದಾರೆ. ಆ ಸಮಾರಂಭದಲ್ಲಿ ಬಂಗಾರಪ್ಪ ಹೇಳಿದ್ದು ಇಷ್ಟು;
- ಅನೇಕ ಕಾರಣಗಳಿಗಾಗಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಪ್ರವೇಶಿಸಿದೆ. ವಾಜಪೇಯಿ, ಆಡ್ವಾಣಿ ಬಗ್ಗೆ ಅಪಾರ ಗೌರವವಿದೆ. ನಮ್ಮನ್ನು ಗೌರವದಿಂದ ನಡೆಸಿಕೊಳ್ಳ ಬೇಕಾದ್ದು ಅವರ ಜವಬ್ದಾರಿ.
- ಮಾಜಿ ಮುಖ್ಯಮಂತ್ರಿಯಾಗಿ ಹಾಗೂ ಮೂರು ಬಾರಿ ಸಂಸದನಾಗಿ ಆಯ್ಕೆಯಾದ ನನ್ನನ್ನು ಆ ಪಕ್ಷ ಸೂಕ್ತವಾಗಿ ಪರಿಗಣಿಸಿಲ್ಲ. ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ. ರಾಜ್ಯಘಟಕದ ಅಧ್ಯಕ್ಷರ ಆಯ್ಕೆ ತೀರ್ಮಾನ ಸರಿಯಾದವಲ್ಲ.
- ಸ್ಥಳೀಯ ಸಂಸ್ಥೆ ಚುನಾವಣೆ ನಂತರ ಈ ಸರಕಾರ ಉಳಿಯುವುದಿಲ್ಲ. ಸರಕಾರ ಬಿದ್ದು ಹೋಗುತ್ತದೆ. ಹೀಗಾಗಿ ನಾವು ಪರ್ಯಾಯ ಶಕ್ತಿಯಾಗಿ ರೂಪುಗೊಳ್ಳುವುದು ಅನಿವಾರ್ಯ. ಬಿಜೆಪಿಯಲ್ಲಿ ಗೌರವ ದಕ್ಕದಿದ್ದರೆ ಮುಂದಿನ ದಾರಿ ನೋಡಿಕೊಳ್ಳಬೇಕಾಗುತ್ತದೆ.
ಮುಖಪುಟ / ವಾರ್ತೆಗಳು












Click it and Unblock the Notifications