ಶ್ರೀಮಂಜುನಾಥನ ಧರ್ಮಸ್ಥಳದಲ್ಲಿ ಡಿ.7ರಿಂದ ‘ಲಕ್ಷದೀಪ’ ಉತ್ಸವ
ಶ್ರೀಮಂಜುನಾಥನ ಧರ್ಮಸ್ಥಳದಲ್ಲಿ ಡಿ.7ರಿಂದ ‘ಲಕ್ಷದೀಪ’ ಉತ್ಸವ
ಲಕ್ಷ ದೀಪೋತ್ಸವದ ಅಂಗವಾಗಿ ಸರ್ವ ಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ
ಡಿಸೆಂಬರ್ 7ರಿಂದ 12ರವರೆಗೂ ಲಕ್ಷದೀಪೋತ್ಸವ ವಾರ್ಷಿಕ ಕಾರ್ಯಕ್ರಮ ನಡೆಯಲಿದ್ದು , ಈ ಸಂದರ್ಭದಲ್ಲಿ ಸರ್ವ ಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಡಿಸೆಂಬರ್ 10ರಂದು ನಡೆಯುವ ಸರ್ವ ಧರ್ಮ ಸಮ್ಮೇಳನವನ್ನು ಕೇಂದ್ರದ ಮಾಜಿ ಸಚಿವ ಡಾ.ಕರಣ್ ಸಿಂಗ್ ಉದ್ಘಾಟಿಸುವರು. ಕೇಂದ್ರ ಇಂಧನ ಸಚಿವ ಪಿ.ಎಂ. ಸಯೀದ್ ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ಅರಳುಮಲ್ಲಿಗೆ ಪಾರ್ಥಸಾರಥಿ, ನ್ಯಾಯಮೂರ್ತಿ ಎಂ.ಎಫ್. ಸಲ್ಡಾನಾ ಹಾಗೂ ಜಿತೇಂದ್ರಕುಮಾರ್ ಉಪನ್ಯಾಸ ನೀಡುವರು.
ಡಿಸೆಂಬರ್ 11ರಂದು ನಡೆಯುವ ಸಾಹಿತ್ಯ ಸಮ್ಮೇಳನವನ್ನು ರಾಜ್ಯದ ಕಂದಾಯ ಸಚಿವ ಎಂ.ಪಿ.ಪ್ರಕಾಶ್ ವಹಿಸುವರು. ಖ್ಯಾತ ಕಥೆಗಾರ ಯಶವಂತ ಚಿತ್ತಾಲರ ಅಧ್ಯಕ್ಷತೆಯಲ್ಲಿ ಈ ಸಮ್ಮೇಳನ ನಡೆಯಲಿದ್ದು , ಅಗ್ರಹಾರ ಕೃಷ್ಣಮೂರ್ತಿ, ಎಸ್. ಮಂಗಳಾ ಸತ್ಯನ್ ಹಾಗೂ ಪ್ರೊ. ಬಾಲಣ್ಣ ಶೀಗೆಹಳ್ಳಿ ಉಪನ್ಯಾಸ ನೀಡುವರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications