ಸಾಹಿತ್ಯ ಪರಿಷತ್‌ನಿಂದ ಪುಸ್ತಕ ಸಂತೆ ; ಪುಸ್ತಕ ಕೊಳ್ಳಿರೊ ನೀವೆಲ್ಲರೂ!

ಸಾಹಿತ್ಯ ಪರಿಷತ್‌ನಿಂದ ಪುಸ್ತಕ ಸಂತೆ ; ಪುಸ್ತಕ ಕೊಳ್ಳಿರೊ ನೀವೆಲ್ಲರೂ!
ಪ್ರತಿ ಶನಿವಾರ ಪರಿಷತ್‌ನ ಅಂಗಳದಲ್ಲಿ ಪುಸ್ತಕ ಸಂತೆ

ಹಳ್ಳಿ ಕಡೆ ವಾರಕ್ಕೊಮ್ಮೆ ನಡೆಯುವ ಸಂತೆಯನ್ನು ಎಂದಾದರೂ ನೋಡಿದ್ದೀರಾ? ಗ್ರಾಮೀಣ ಪ್ರದೇಶಗಳಲ್ಲಿ ಹುಟ್ಟಿ ಬೆಳೆದವರಾದರೆ ನೋಡಿರುತ್ತೀರಿ ಬಿಡಿ. ಅಡುಗೆ ಕೋಣೆ, ಬಚ್ಚಲನ್ನೂ ಆಧುನಿಕತೆ ಪ್ರವೇಶಿಸಿದ ಹೊತ್ತು ಹಳ್ಳಿಯ ಸಂತೆಗಳೂ ವಿರಳವಾಗಿವೆ. ಇದು ಫುಡ್‌ವರ್ಲ್ಡ್‌, ಮೈಹೋಂ, ಮೆಟ್ರೊಗಳ ಕಾಲವಯ್ಯ!

ಸಂತೆಗಳ ಅಸ್ತಿತ್ವವೇ ನಶಿಸುತ್ತಿರುವ ಈ ಹೊತ್ತು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಪುಸ್ತಕ ಸಂತೆಯ ಕನಸು ಕಾಣುತ್ತಿದ್ದಾರೆ. ಬೆಂಗಳೂರಿನ ಪರಿಷತ್‌ ಆವರಣದಲ್ಲಿ ಪ್ರತಿ ಶನಿವಾರ ಸಂಜೆ ಪುಸ್ತಕ ಸಂತೆ ನಡೆಸುವುದು ಚಂಪಾ ಉದ್ದೇಶ.

ಪುಸ್ತಕ ಪ್ರಕಾಶಕರು ಮಾತ್ರವಲ್ಲದೆ ಲೇಖಕರೂ ಪುಸ್ತಕ ಸಂತೆಯಲ್ಲಿ ಭಾಗವಹಿಸಬಹುದು. ಮಧ್ಯವರ್ತಿಗಳ ಕಾಟ ಇಲ್ಲವೇ ಇಲ್ಲ . ಶನಿವಾರ ಸಂಜೆ 4 ರಿಂದ 9ರವರೆಗೂ ವ್ಯಾಪಾರ. ವಿಶ್ವವಿದ್ಯಾಲಯಗಳು, ಖಾಸಗಿ ಪ್ರಕಾಶಕರು, ಪ್ರಾಧಿಕಾರಗಳು ಈ ಸಂತೆಯಲ್ಲಿ ಭಾಗವಹಿಸಲಿವೆ. ಪುಸ್ತಕ ಪ್ರದರ್ಶನಕ್ಕೆ ಅಗತ್ಯವಾದ ಟೇಬಲ್ಲು ಕುರ್ಚಿಗಳನ್ನು ಪರಿಷತ್ತು ಒದಗಿಸಲಿದೆ ಎಂದು ಚಂಪಾ ತಮ್ಮ ಯೋಜನೆಯನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಪುಸ್ತಕ ಸಂತೆ ಯಶಸ್ವಿಯಾದರೆ ರಾಜ್ಯದ ಜಿಲ್ಲಾಕೇಂದ್ರಗಳಿಗೂ ಸಂತೆಯನ್ನು ವಿಸ್ತರಿಸುವ ಉದ್ದೇಶ ಚಂಪಾ ಅವರಿಗಿದೆ.

ಅಂದಹಾಗೆ, ಪುಸ್ತಕ ಸಂತೆ ಪ್ರಾರಂಭವಾಗುವ ದಿನಾಂಕ ಇನ್ನೂ ಖಚಿತಗೊಂಡಿಲ್ಲ . ಸಂತೆ ಶುರುವಾದ ಮೇಲೆ ಪರಿಷತ್ತಿನ ಕಡೆ ಹೋಗುವುದನ್ನು ಮರೆಯಬೇಡಿರಿ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+