ಸಂಸ್ಕೃತಿ ಇಲಾಖೆಯ ಉಷಾ ಗಣೇಶ್‌ಗೆ ಕನ್ನಡ ಕಟ್ಟಾಳುಗಳ ಬೆದರಿಕೆ?
ಸಂಸ್ಕೃತಿ ಇಲಾಖೆಯ ಉಷಾ ಗಣೇಶ್‌ಗೆ ಕನ್ನಡ ಕಟ್ಟಾಳುಗಳ ಬೆದರಿಕೆ?
ಕನ್ನಡ ಸಂಸ್ಥೆಗಳೊಂದಿಗೆ ಸಹಕರಿಸದಿದ್ದರೆ ಹಲ್ಲೆ : ಪತ್ರ ಮುಖೇನ ಬೆದರಿಕೆ
ಕನ್ನಡ ಸಂಘಸಂಸ್ಥೆಗಳ ಅಭಿವೃದ್ಧಿಗಾಗಿ ಶ್ರಮಿಸದಿದ್ದರೆ ಹಲ್ಲೆ ನಡೆಸುವುದಾಗಿ ಮಹೇಶ್ ಎನ್ನುವ ವ್ಯಕ್ತಿ ಬೆದರಿಕೆ ಒಡ್ಡಿದ್ದಾರೆ. ಅಂಚೆ ಮೂಲಕ ಬಂದಿರುವ ಬೆದರಿಕೆ ಪತ್ರದಲ್ಲಿ ಮಹೇಶ್ ಎಂದು ಹೇಳಿಕೊಂಡಿರುವ ಈ ವ್ಯಕ್ತಿ , ತನ್ನನ್ನು ಬೆಂಗಳೂರಿನ ಗಾಂಧಿನಗರದ ಕನ್ನಡ ಸಂಘ ಸಂಸ್ಥೆಗಳ ಒಕ್ಕೂಟಕ್ಕೆ ಸೇರಿದವನೆಂದು ಗುರ್ತಿಸಿಕೊಂಡಿರುವುದಾಗಿ ಉಷಾ ಗಣೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಉಷಾ ಗಣೇಶ್ ಅಧಿಕಾರ ವಹಿಸಿಕೊಂಡ ದಿನದಿಂದ ಕನ್ನಡ ಸಂಸ್ಥೆಗಳಿಗೆ ನಿಧಿ ಬಿಡುಗಡೆ ಮಾಡುವಲ್ಲಿ ಅನ್ಯಾಯ ಮಾಡಲಾಗುತ್ತಿದೆ. ಇನ್ನು ಮುಂದಾದರೂ ಕನ್ನಡ ಸಂಸ್ಥೆಗಳೊಂದಿಗೆ ಸಹಕರಿಸದಿದ್ದಲ್ಲಿ ಸಂಸ್ಥೆಗಳ ಮೊದಲ ಗುರಿ ನೀವಾಗುತ್ತೀರಿ ಎಂದು ಬೆದರಿಕೆ ಪತ್ರದಲ್ಲಿ ತಿಳಿಸಲಾಗಿದೆ.
ನವಂಬರ್ 25ರಂದು ರೇಸ್‌ಕೋರ್ಸ್ ರಸ್ತೆಯಲ್ಲಿನ ಖನಿಜ ಭವನದ ಮೇಲೆ ನಡೆದ ದಾಳಿಯನ್ನು ಕನ್ನಡ ವಿರೋಧಿಗಳ ಮೇಲಿನ ದಾಳಿಯ ಮೊದಲ ಹಂತವೆಂದು ಪತ್ರದಲ್ಲಿ ಬಣ್ಣಿಸಲಾಗಿದೆ.
ಪೊಲೀಸರಿಗೆ ನೀಡಿರುವ ದೂರಿನ ಪ್ರತಿಗಳನ್ನು ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಕಾರ್ಯದರ್ಶಿಗಳಿಗೂ ಉಷಾ ಗಣೇಶ್ ರವಾನಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications