ಮಾಹಾರಾಷ್ಟ್ರ ರಾಜ್ಯಪಾಲ ಹುದ್ದೆಗೆ ‘ಎಸ್’ ಎಂದ ಎಸ್.ಎಮ್.ಕೃಷ್ಣ
ಮಾಹಾರಾಷ್ಟ್ರ ರಾಜ್ಯಪಾಲ ಹುದ್ದೆಗೆ ‘ಎಸ್’ ಎಂದ ಎಸ್.ಎಮ್.ಕೃಷ್ಣ
ಸೋನಿಯಾ ಆದೇಶಕ್ಕೆ ತಲೆಬಾಗಿದ ಕೃಷ್ಣ, ಕರ್ನಾಟಕದ ಬೆಂಬಲಿಗರಿಗೆ ನಿರಾಶೆ
ಚೀನಾ ಪ್ರವಾಸದಿಂದ ಮಂಗಳವಾರ ಸ್ವದೇಶಕ್ಕೆ ಹಿಂತಿರುಗಿದ ಕೃಷ್ಣ ಸೋನಿಯಾಗಾಂಧಿ ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ಸಮಾಲೋಚನೆ ನಡೆಸಿ ಮಹಾರಾಷ್ಟ್ರ ರಾಜ್ಯಪಾಲ ಹುದ್ದೆಯನ್ನು ಅವರು ಒಪ್ಪಿಕೊಂಡರೆಂದು ಮೂಲಗಳು ತಿಳಿಸಿವೆ.
ಸೋನಿಯಾ ಗಾಂಧಿ ಆಪ್ತರಲ್ಲಿ ಒಬ್ಬರಾದ ಅಂಬಿಕಾ ಸೋನಿ, ಅಹ್ಮದ್ ಪಟೇಲ್ ಮತ್ತು ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್‌ರೊಂದಿಗೂ ಕೃಷ್ಣ ಮಾತುಕತೆ ನಡೆಸಿದ್ದಾರೆ.
ಸದಾ ಬದ್ಧ : ‘ಕಾಂಗ್ರೆಸ್‌ನ ವಿಧೇಯ ಸೇವಕ ನಾನು, ಕಾಂಗ್ರೆಸ್ ಅಧ್ಯಕ್ಪರ ಆದೇಶಕ್ಕೆ ಸದಾ ಬದ್ಧ’ ಎಂಬ ನಿಲುವನ್ನು ಕೃಷ್ಣ ತಳೆದಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ತಾವು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ವಿರುದ್ಧ ನಿಲವು ತಳೆದಿದ್ದರು ಎಂಬ ಹಿನ್ನೆಲೆಯಲ್ಲಿ ಶಿವಸೇನೆ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ಅವರ ನೇಮಕವನ್ನು ವಿರೋಧಿಸಿತ್ತು. ಈ ವಿರೋಧಗಳಿಗೆ ಸೊಪ್ಪು ಹಾಕದ ಕೃಷ್ಣ ಹೈಕಮಾಂಡ್ ಆದೇಶಕ್ಕೆ ತಲೆಬಾಗಿದ್ದಾರೆ.
ಕೃಷ್ಣ ಅವರ ನೇಮಕದ ವಿರುದ್ಧ ಮಿತ್ರ ಪಕ್ಷವಾದ ಎನ್‌ಸಿಪಿ ಮತ್ತು ಶಿವಸೇನೆಯ ವಿರೋಧಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಆನಂದ ಶರ್ಮಾ ನೆರೆಯ ರಾಜ್ಯಗಳ ರಾಜಕಾರಣಿಗಳನ್ನು ರಾಜ್ಯಪಾಲರಾಗಿ ನೇಮಕ ಮಾಡುವುದು ಹೊಸ ಸಂಪ್ರದಾಯವೇನಲ್ಲ.ಹಿಂದೆಯೂ ಆಗಿತ್ತು ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯಪಾಲರ ಹುದ್ದೆ ಸ್ವೀಕರಿಸಿದ ಮಾತ್ರಕ್ಕೆ ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳುವುದು ಕಡ್ಡಾಯವೇನಿಲ್ಲ.ರಾಜ್ಯಪಾಲರಾದ ನಂತರ ಸಕ್ರಿಯ ರಾಜಕಾರಣಕ್ಕೆ ಮರಳುವ ಸಂಪ್ರದಾಯ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇ ಇದೆ.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications