ನೇಮಕಾತಿಯಲ್ಲಿಅನ್ಯಾಯ; ಹುಬ್ಬಳ್ಳಿಯಲ್ಲಿ ಪಾಪು ನೇತೃತ್ವದಿ ರೈಲುತಡೆ
ನೇಮಕಾತಿಯಲ್ಲಿಅನ್ಯಾಯ; ಹುಬ್ಬಳ್ಳಿಯಲ್ಲಿ ಪಾಪು ನೇತೃತ್ವದಿ ರೈಲುತಡೆ
ನ್ಯಾಯ ದೊರಕಿಸುವುದಾಗಿ ಪ್ರಾಂತೀಯ ರೈಲ್ವೆ ಮೇನೇಜರ್ ಭರವಸೆ
ಕರ್ನಾಟಕ ಅಭಿವೃದ್ಧಿ ಸಮಿತಿ ಬುಧವಾರ ರೈಲ್ವೆ ತಡೆಗೆ ಕರೆ ನೀಡಿತ್ತು . ಸಮಿತಿಯ ಅಧ್ಯಕ್ಷ ಡಾ.ಪಾಟೀಲ ಪುಟ್ಟಪ್ಪ ರೈಲ್ವೆ ರೊಕೊದ ಮುಂದಾಳತ್ವ ವಹಿಸಿದ್ದರು. ಬೆಳಗ್ಗೆ 6ಕ್ಕೆ ಪ್ರಾರಂಭವಾದ ರೈಲ್ವೆ ತಡೆ ಕಾರ್ಯಕ್ರಮದ ಅನ್ವಯ ಸುಮಾರು 5 ರೈಲುಗಳನ್ನು ತಡೆಯಲಾಯಿತು.
ಪ್ರಾಂತೀಯ ರೈಲ್ವೆ ಮೇನೇಜರ್ ಕೆ.ಡಿ. ಮೈನ್‌ರಾಜ್ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ನೇಮಕಾತಿಯಲ್ಲಿ ಕನ್ನಡಿಗರಿಗೆ ನ್ಯಾಯ ದೊರಕಿಸಲು ಪ್ರಯತ್ನಿಸುವುದಾಗಿ ಮೈನ್‌ರಾಜ್ ನೀಡಿದ ಆಶ್ವಾಸನೆಯ ಮೇರೆಗೆ ಮಧ್ಯಾಹ್ನ 12ಕ್ಕೆ ರೈಲ್ವೆ ತಡೆ ಕಾರ್ಯಕ್ರಮ ಮುಕ್ತಾಯವಾಯಿತು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications