ಶ್ರೀರಂಗಂನ ಮಹಿಳೆಉಷಾ ಕಾಂಚೀಪುರಂ ಪೊಲೀಸರೆದುರು ಹಾಜರು

ಶ್ರೀರಂಗಂನ ಮಹಿಳೆಉಷಾ ಕಾಂಚೀಪುರಂ ಪೊಲೀಸರೆದುರು ಹಾಜರು
ಉಷಾ ತಲೆ ಮರೆಸಿಕೊಂಡಿರಲಿಲ್ಲ, ಆಕೆ ಕ್ಯಾನ್ಸರ್‌ ರೋಗಿ -ವಕೀಲರು

ಕಾಂಚೀಪುರಂ : ಕಂಚಿ ಶಂಕರಾಚಾರ್ಯರು ಬಂಧನಕ್ಕೊಳಗಾಗಿರುವ ಶಂಕರರಾಮನ್‌ ಕೊಲೆ ಪ್ರಕರಣದಲ್ಲಿ ಪೊಲೀಸರು ಹುಡುಕುತ್ತಿದ್ದ ಶ್ರೀರಂಗಂನ ಮಹಿಳೆ ಉಷಾ ನ.30ರ ಮಂಗಳವಾರ ಪೊಲೀಸರೆದುರು ಹಾಜರಾದರು.

ವಕೀಲರಾದ ಸುಧಾ ರಾಮಲಿಂಗಂ ಮತ್ತು ಅರಿವು ನಿಧಿ, ಉಷಾ ಅವರನ್ನು ಕಾಂಚೀಪುರಂ ಪೊಲೀಸರೆದುರು ಮಂಗಳವಾರ ಹಾಜರುಪಡಿಸಿದರು. ಆನಂತರ ಹೆಚ್ಚಿನ ತನಿಖೆಗಾಗಿ ಉಷಾ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಕೊಲೆ ಪ್ರಕಣದಲ್ಲಿ ಉಷಾ ಅವರ ಪಾತ್ರದ ಬಗ್ಗೆ ಶಂಕೆಯಿದೆ. ಆಕೆಯಾಂದಿಗೆ ಕಂಚಿಶ್ರೀಗಳು ನಿಕಟ ಸಂಪರ್ಕ ಹೊಂದಿದ್ದರು. ಆಕೆಗೆ ಉಚಿತ ಮನೆ ಹಾಗೂ ಭಾರೀ ಪ್ರಮಾಣದ ಹಣವನ್ನು ಮಠದ ವತಿಯಿಂದ ನೀಡಲಾಗಿತ್ತು . ಪ್ರಸ್ತುತ ಉಷಾ ತಲೆ ಮರೆಸಿಕೊಂಡಿದ್ದಾಳೆ ಎಂದು ಸೋಮವಾರ ನ್ಯಾಯಾಲಯದಲ್ಲಿ ಪೊಲೀಸರು ತಿಳಿಸಿದ್ದರು. ಮರುದಿನವೇ ಉಷಾ ಪೊಲೀಸರ ಮುಂದೆ ಶರಣಾಗಿರುವುದು ಕುತೂಹಲ ಮೂಡಿಸಿದೆ.

ಉಷಾ ಅವರನ್ನು ಪೊಲೀಸರೆದುರು ಹಾಜರುಪಡಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆಕೆಯ ವಕೀಲರು- ಉಷಾ ತಲೆ ಮರೆಸಿಕೊಂಡಿರಲಿಲ್ಲ . ಯಾವುದೇ ರೀತಿಯ ತನಿಖೆಗಾಗಿ ಆಕೆ ಸ್ವಇಚ್ಛೆಯಿಂದ ಪೊಲೀಸರೆದುರು ಹಾಜರಾಗಿದ್ದಾರೆ. ಆಕೆಯಾಬ್ಬ ಕ್ಯಾನ್ಸರ್‌ ರೋಗಿ ಹಾಗೂ ಕಂಚಿ ಮಠದ ದತ್ತಿನಿಧಿಯ ಫಲಾನುಭವಿಗಳಲ್ಲೊಬ್ಬರು ಎಂದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+