ಜಾಮೀನು ನೀಡಬೇಡಿ, ಕಂಚಿಶ್ರೀ ತಪ್ಪೊಪ್ಪಿಕೊಂಡಿದ್ದಾರೆ -ಪೊಲೀಸ್‌

ಜಾಮೀನು ನೀಡಬೇಡಿ, ಕಂಚಿಶ್ರೀ ತಪ್ಪೊಪ್ಪಿಕೊಂಡಿದ್ದಾರೆ -ಪೊಲೀಸ್‌
ಶಂಕರರಾಮನ್‌ ಕೊಲೆ ಪ್ರಕರಣದಲ್ಲಿ ಹೊಸ ತಿರುವು, ಉಷಾಗಾಗಿ ಶೋಧ

ಬೆಂಗಳೂರು : ಶಂಕರರಾಮನ್‌ ಕೊಲೆ ಪ್ರಕರಣದಲ್ಲಿ ಈಗ ಹೊಸ ತಿರುವು. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಕಂಚಿ ಶ್ರೀ ಜಯೇಂದ್ರ ಸರಸ್ವತಿಗಳು ವಿಚಾರಣೆ ಸಂದರ್ಭದಲ್ಲಿ ಕೊಲೆಯಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಮಿಳುನಾಡು ಸರ್ಕಾರವು ಮದ್ರಾಸ್‌ ಹೈಕೋರ್ಟಿಗೆ ತಿಳಿಸಿದೆ.

ಜಾಮೀನು ಕೋರಿ ಜಯೇಂದ್ರರ ಪರವಾಗಿ ಅರ್ಜಿ ಸಲ್ಲಿಸಿರುವುದನ್ನು ವಿರೋಧಿಸಿದ ಪ್ರಾಸಿಕ್ಯೂಷನ್‌ ಪರ ವಕೀಲ ಕೆ.ಟಿ.ಎಸ್‌. ತುಳಸಿ- ಶ್ರೀಗಳ ತಪ್ಪೊಪ್ಪಿಗೆ ಜೊತೆ ಶ್ರೀರಂಗಂನ ಉಷಾ ಎಂಬ ಮಹಿಳೆಯಾಂದಿಗೆ ಸತತವಾಗಿ 900ಪಲ್ಸ್‌ ನಷ್ಟು ಮೊಬೈಲ್‌ ದೂರವಾಣಿಯಲ್ಲಿ ಸಂಭಾಷಣೆ ನಡೆಸಿರುವ ವಿಷಯ ಬೆಳಕಿಗೆ ಬಂದಿದೆ. ಉಷಾಳನ್ನು ವಿಚಾರಣೆ ನಡೆಸಲು ತಾವು ಬಯಸಿದ್ದೆವು. ಆದರೆ ಆಕೆ ನಾಪತ್ತೆಯಾಗಿದ್ದಾಳೆ ಎಂದರು.

ನ್ಯಾಯಾಲಯ ನವೆಂಬರ್‌20ರಂದು ಸ್ವಾಮೀಜಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಳ್ಳಿಹಾಕಿದ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಎರಡು ಹೊಸ ಸಾಕ್ಷ್ಯಧಾರಗಳು ದೊರಕಿದೆ. ಕೊಲೆ ಸಂಬಂಧ ಸಂಚು ರೂಪಿಸಲು ಸೆಪ್ಟೆಂಬರ್‌ 1 ರಂದು ಜಯೇಂದ್ರರು ಮಠದಲ್ಲೇ ಕೂತು ಅಪ್ಪು, ರವಿ ಮತ್ತು ಕದಿರವನ್‌ ಜತೆ ಮಾತುಕತೆ ನಡೆಸಿದ್ದನ್ನು ಇಬ್ಬರು ಕಣ್ಣಾರೆ ನೋಡಿದ್ದಾರೆ. ಈ ಇಬ್ಬರೂ ಪ್ರತ್ಯಕ್ಷ ಸಾಕ್ಷಿಗಳು ಈಗಾಗಲೇ ಭಾರತೀಯ ಅಪರಾಧ ದಂಡ ಪ್ರಕ್ರಿಯ ಸಂಹಿತೆಯ 161ನೇ ಸೆಕ್ಷನ್‌ ಪ್ರಕಾರ ಪೊಲೀಸರಿಗೆ ಸಾಕ್ಷಿ ಹೇಳಿಕೆ ನೀಡಿದ್ದಾರೆ ಎಂದು ವಕೀಲರು ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+