ಬೆಂಗಳೂರಿನ ಪ್ರಥಮಪ್ರಜೆಯಾಗಿ ಆರ್.ನಾರಾಯಣ ಸ್ವಾಮಿ ಆಯ್ಕೆ
ಬೆಂಗಳೂರಿನ ಪ್ರಥಮಪ್ರಜೆಯಾಗಿ ಆರ್.ನಾರಾಯಣ ಸ್ವಾಮಿ ಆಯ್ಕೆ
ಉಪ ಮೇಯರ್ ಆಗಿ ಶಾಂತಾಕುಮಾರಿ ಆಯ್ಕೆ
ನವಂಬರ್ 29ರ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸಿ.ಮುನಿಕೃಷ್ಣ ಅವರನ್ನು ನಾರಾಯಣಸ್ವಾಮಿ ಸೋಲಿಸಿದರು. ನಾರಾಯಣಸ್ವಾಮಿಯವರಿಗೆ 71 ಮತಗಳು ಬಂದರೆ, ಮುನಿಕೃಷ್ಣ 21 ಮತ ಪಡೆದರು. ಕಾಂಗ್ರೆಸ್ ಪಕ್ಷದವರೇ ಆದ ಶಾಂತಕುಮಾರಿ ಉಪ ಮೇಯರ್ ಆಗಿ ಆಯ್ಕೆಯಾದರು.
ಮೇಯರ್ ಸ್ಥಾನಕ್ಕೆ ನಾರಾಯಣ ಸ್ವಾಮಿ ಅವರೊಂದಿಗೆ ಕಾಂಗ್ರೆಸ್‌ನ ಮುನಿರಾಜು ಪ್ರಬಲ ಸ್ಪರ್ಧೆಯಾಡ್ಡಿದ್ದರು. ಇಬ್ಬರೂ ಇದೇ ಮೊದಲ ಬಾರಿಗೆ ಪಾಲಿಕೆ ಪ್ರವೇಶಿಸಿದ್ದು , ಮೊದಲ ಯತ್ನದಲ್ಲೇ ಮೇಯರ್ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದರು. ಈ ಬಾರಿ ಮೀಸಲು ವರ್ಗಕ್ಕೆ ಮೇಯರ್ ಪಟ್ಟ ನಿಗದಿಯಾಗಿದ್ದುದು ಇವರ ಆಸೆಗೆ ಪೂರಕವಾಗಿತ್ತು .
ಬಿ.ಕೆ. ಹರಿಪ್ರಸಾದ್ ಅವರ ಬೆಂಬಲದಿಂದ ಮುನಿರಾಜು ಮೇಯರ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಆದರೆ ಪಕ್ಷದ ಹೈಕಮಾಂಡ್ ಸೂಚನೆಯ ಮೇರೆಗೆ ಮುನಿರಾಜು ನಾಮಪತ್ರ ವಾಪಸ್ಸು ಪಡೆದು ನಾರಾಯಣ ಸ್ವಾಮಿ ಆಯ್ಕೆಗೆ ಅವಕಾಶ ಮಾಡಿಕೊಟ್ಟರು. ಅಂದಹಾಗೆ, ನಾರಾಯಣ ಸ್ವಾಮಿ ಬೆಂಗಳೂರಿನ 41ನೇ ಮೇಯರ್.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications