ಪೊಲೀಸರ ಸಾಹಸ ; ಮರಳಿ ಅಪ್ಪಅಮ್ಮನ ಮಡಿಲು ಸೇರಿದಳು ಪವಿತ್ರ
ಪೊಲೀಸರ ಸಾಹಸ ; ಮರಳಿ ಅಪ್ಪಅಮ್ಮನ ಮಡಿಲು ಸೇರಿದಳು ಪವಿತ್ರ
ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ ಬೆಂಗಳೂರು ಪೊಲೀಸ್ ಪಡೆ
ರಾಜಾಜಿನಗರದ ಉದ್ಯಮಿ ಅನಂತ್ ಎನ್ನುವವರ ಮಗಳು ಪವಿತ್ರಾ ಎನ್ನುವ ಐದು ವರ್ಷದ ಬಾಲಕಿ ನ.26ರಂದು ಅಪಹರಣಕ್ಕೊಳಗಾಗಿದ್ದಳು. ಮನೆಯ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ಆರೋಪಿಗಳು ಅಪಹರಿಸಿ ಮೈಸೂರಿನ ವಸತಿಗೃಹವೊಂದರಲ್ಲಿ ಇರಿಸಿದ್ದರು. ಬಾಲಕಿಯ ತಂದೆಯನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದ ಅಪಹರಣಕಾರರು 10 ಲಕ್ಷ ರುಪಾಯಿ ಒತ್ತೆ ಹಣ ನೀಡುವಂತೆ, ಇಲ್ಲದಿದ್ದಲ್ಲಿ ಪವಿತ್ರಾಳ ಕೈಕಾಲು ಕತ್ತರಿಸುವುದಾಗಿ ಬೆದರಿಕೆ ಒಡ್ಡಿದ್ದರು.
ಅನಂತ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಬೆಂಗಳೂರು ಪೊಲೀಸರು ಅಪಹರಣಕಾರರಿಗಾಗಿ ರಾಜ್ಯದೆಲ್ಲಡೆ ಬಲೆ ಬೀಸಿದರು. ಪತ್ತೆ ಕಾರ್ಯದಲ್ಲಿ ಬೆಂಗಳೂರು ಪೊಲೀಸರೊಂದಿಗೆ ಮಂಡ್ಯ, ಮೈಸೂರು ಹಾಗೂ ಕೋಲಾರದ ಪೊಲೀಸರು ಸಹಕರಿಸಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಸ್. ಮರಿಸ್ವಾಮಿ ತಿಳಿಸಿದ್ದಾರೆ.
ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿ ರಸ್ತೆ ಸಮೀಪದ ವಿದ್ಯಾರಣ್ಯನಗರದ ರಾಜು (23), ಬಿಹಾರದ ಪ್ರದೀಪ್ ತಿವಾರಿ (21) ಹಾಗೂ ವಿನೋದ್‌ಕುಮಾರ್ (23) ಎನ್ನುವ ಮೂವರನ್ನು ಬಂಧಿಸಲಾಗಿದೆ. ಎಕ್ಸ್‌ಮಾಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈ ಆರೋಪಿಗಳು ಐಷಾರಾಮ ಬದುಕಿನ ಆಸೆಯಿಂದ ಈ ಅಪಹರಣ ನಡೆಸಿದ್ದರು.
ಆರೋಪಿಗಳಲ್ಲೊಬ್ಬನಾದ ರಾಜು ಟೀವಿ ರಿಪೇರಿಯ ನೆಪದಲ್ಲಿ ಅನಂತ್ ಅವರ ಮನೆಗೆ ಆಗಾಗ ಬರುತ್ತಿದ್ದ . ಆತ ಅನಂತ್ ಅವರ ದೂರದ ಸಂಬಂಧಿಯೂ ಹೌದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications