ಮಹಾರಾಷ್ಟ್ರ ರಾಜ್ಯಪಾಲರಾಗಿ ಕರ್ನಾಟಕದ ಎಸ್.ಎಂ.ಕೃಷ್ಣ ನೇಮಕ
ಮಹಾರಾಷ್ಟ್ರ ರಾಜ್ಯಪಾಲರಾಗಿ ಕರ್ನಾಟಕದ ಎಸ್.ಎಂ.ಕೃಷ್ಣ ನೇಮಕ
ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಹೊಸ ಅವತಾರ
ಮಹಾರಾಷ್ಟ್ರದ ರಾಜ್ಯಪಾಲ ಮಹಮ್ಮದ್ ಫಜಲ್‌ರವರ ಅಧಿಕಾರದ ಅವಧಿ ಶುಕ್ರವಾರ(ನ.26) ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಎಸ್.ಎಂ.ಕೃಷ್ಣರನ್ನು ನೂತನ ರಾಜ್ಯಪಾಲರಾಗಿ ನೇಮಕ ಮಾಡಿರುವುದಾಗಿ ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ. ಮಹಾರಾಷ್ಟ್ರ ರಾಜ್ಯಪಾಲರಾಗಲು ಉತ್ತರಾಂಚಲ ಮುಖ್ಯಮಂತ್ರಿ ಎನ್.ಡಿ.ತಿವಾರಿ ಅವರ ಹೆಸರು ಸಹ ಕೇಳಿ ಬಂದಿತ್ತು.
ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ, ಬೆಂಗಳೂರನ್ನು ಸಿಂಗಾಪುರವನ್ನಾಗಿ ಪರಿವರ್ತಿಸುವ ಕನಸು ಕಂಡಿದ್ದರು. ಐಟಿ-ಬಿಟಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದರು. ಎಸ್.ಎಂ.ಕೃಷ್ಣ ಪ್ರಸ್ತುತ ರಾಜ್ಯಪಾಲರಾಗುವ ಮೂಲಕ ರಾಜ್ಯದ ರಾಜಕಾರಣ ತುಸು ಮಂಕಾಗಿದೆ.
(ಏಜನ್ಸೀಸ್)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications