ಯು.ಆರ್.ರಾವ್, ಜಿ.ಎಸ್.ಸದಾಶಿವಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ
ಯು.ಆರ್.ರಾವ್, ಜಿ.ಎಸ್.ಸದಾಶಿವಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ
13 ಹಿರಿಯ ಪತ್ರಕರ್ತರಿಗೆ 2004ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ
ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎನ್. ಅರ್ಜುನದೇವ ಅವರ ಅಧ್ಯ ಕ್ಷತೆಯಲ್ಲಿ ನ.26ರ ಶಕ್ರವಾರ ನಡೆದ ಮಾಧ್ಯಮ ಅಕಾಡೆಮಿಯ ಸರ್ವ ಸದಸ್ಯರ ಸಭೆಯು 2004ನೇ ಸಾಲಿನ ಪ್ರಶಸ್ತಿಗಳನ್ನು ಆಯ್ಕೆ ಮಾಡಿತು. ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮದಲ್ಲಿ ನಿತ್ಯ ಬಳಕೆಯಾಗುತ್ತಿರುವ ್ಫತಂತ್ರಜ್ಞಾನಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಡಾ.ಯು.ಆರ್. ರಾವ್ ಅವರನ್ನು ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
ವಾರ್ಷಿಕ ಪ್ರಶಸ್ತಿ ವಿಜೇತರು :
ಗುಲ್ಬಗಾದ ಯುಎನ್‌ಐ ವರದಿಗಾರ ಶಿವಾನಂದನ್,
ಬಾಗಲಕೋಟೆಯ ‘ಸಮಾಜ ವೀರ’ ದಿನಪತ್ರಿಕೆ ಸಂಪಾದಕ ಎನ್.ಎಚ್. ಶಾಲಗಾರ್,
ಮೈಸೂರಿನ ಆಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ,
ಎಕಾನಾಮಿಕ್ ಟೈಮ್ಸ್ ಪತ್ರಿಕೆಯ ರಾಜಕೀಯ ವಿಭಾಗದ ಸಂಪಾದಕ ಗ್ರೇಬ್ರಿಯಲ್ ವಾಜ್,
ಕನ್ನಡಪ್ರಭ ಪತ್ರಿಕೆಯ ಸಹ ಸಂಪಾದಕ ಜಿ. ಎಸ್. ಸದಾಶಿವ,
ಹುಬ್ಬಳ್ಳಿಯಲ್ಲಿ ‘ದಿ ಹಿಂದೂ’ ಪತ್ರಿಕೆಯ ವಿಶೇಷ ಪ್ರತಿನಿಧಿ ಎಂ. ಮದನ್ ಮೋಹನ್,
ಮಂಡ್ಯದ ಪತ್ರಕರ್ತ ಸಿ.ಪಿ.ಮೂರ್ತಿ,
ಕನ್ನಡಪ್ರಭದ ಸಹ ಸುದ್ದಿ ಸಂಪಾದಕ ಬಿ. ವಿ. ಮಲ್ಲಿ ಕಾರ್ಜುನಯ್ಯ,
ದಾವಣಗೆರೆಯಿಂದ ಪ್ರಕಟವಾಗುತ್ತಿರುವ ‘ಶಿವಮೊಗ್ಗ ಮಲ್ನಾಡುವಾಣಿ’ ಪತ್ರಿಕೆ ಸಂಪಾದಕ ಏಕಾಂತಪ್ಪ,
ಆಕಾಶವಾಣಿಯ ನಿವೃತ್ತ ಬಾತ್ಮೀದಾರ ಎಸ್.ಕೆ.ಶೇಷಚಂದ್ರಿಕ,
ಸಿನಿಮಾ ಪತ್ರಕರ್ತ ಎನ್. ಎಸ್. ರಾಮಚಂದ್ರ,
ಸಂಜೆ ವಾಣಿಯ ಸಹಾಯಕ ಸಂಪಾದಕ ಸುಂದರ ರಾಜ್,
ಸುರ್ಯೋದಯ ಪತ್ರಿಕೆಯ ಎಂ.ಪಿ. ಸುಶೀಲಾ ಹಾಗೂ
ಮೈಸೂರಿನ ಸಂಕ್ರಾಂತಿ ಪತ್ರಿಕೆಯ ಸಂಪಾದಕ ಚಂದ್ರಶೇಖರ ಕುಕ್ಕಿಕಟ್ಟೆ .
ಪ್ರಜಾಪ್ರಗತಿಗೆ ಆಂದೋಲನ ಪ್ರಶಸ್ತಿ : ಜಿಲ್ಲಾ ಪತ್ರಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೈಸೂರಿನ ಆಂದೋಲನ ಪತ್ರಿಕೆ ಅಕಾಡೆಮಿಯಲ್ಲಿ ಸ್ಥಾಪಿಸಿರುವ ‘ಆಂದೋಲನ ಪ್ರಶಸ್ತಿ’ಗೆ ’ತುಮಕೂರಿನ ಪ್ರಜಾಪ್ರಗತಿ’ ಪತ್ರಿಕೆ ಆಯ್ಕೆಯಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications