ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಹಿತಕ್ಕಾಗಿಯೇ ಗ್ರಾಮೀಣ ಪ್ರದೇಶದಿ ಪವರ್‌ಕಟ್‌ -ಕೃಷಿ ಸಚಿವ

By Staff
|
Google Oneindia Kannada News

ರೈತರ ಹಿತಕ್ಕಾಗಿಯೇ ಗ್ರಾಮೀಣ ಪ್ರದೇಶದಿ ಪವರ್‌ಕಟ್‌ -ಕೃಷಿ ಸಚಿವ
ಕೋಲಾರ ಜಿಲ್ಲೆಯಲ್ಲಿ 1,100 ಅಡಿಗಳಿಗೆ ಅಂತರ್ಜಲ ಮಟ್ಟದಲ್ಲಿ ಕುಸಿತ

ಬೆಂಗಳೂರು : ಕೆಪಿಟಿಸಿಎಲ್‌ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪವರ್‌ಕಟ್‌ ಮಾಡುವ ನಿರ್ಧಾರ, ಅಂತರ್ಜಲ ವೃದ್ಧಿಗೆ ಪೂರಕವಾಗಲಿದೆ. ನೀರಾವರಿ ಪಂಪ್‌ಸೆಟ್‌ಗಳಿಂದ ರೈತರು, ಅಂತರ್ಜಲವನ್ನೆಲ್ಲ ಹೀರುವ ಅವಕಾಶ ಇದರಿಂದ ಕಡಿಮೆಯಾಗಿದೆ ಎಂದು ಕೃಷಿ ಸಚಿವ ಕೆ. ಶ್ರೀನಿವಾಸ ಗೌಡ, ವಿದ್ಯುತ್‌ ಕಡಿತದ ನಿರ್ಧಾರವನ್ನು ಸಮರ್ಥಿಸಿದರು.

ನಗರದ ಅರಮನೆ ಆವರಣದಲ್ಲಿ ನಾಲ್ಕು ದಿನಗಳ ಅಗ್ರಿ ಮೇಳವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನದ 24 ಗಂಟೆ ಕಾಲ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್‌ ನೀಡುವುದರಿಂದ, ರೈತರು ದುರುಪಯೋಗಪಡಿಸಿ ಕೊಳ್ಳುವ ಸಾಧ್ಯತೆಗಳಿವೆ. ಕೆಲವು ರೈತರು ಪಂಪ್‌ಸೆಟ್‌ನ ಸ್ವಿಚ್‌ ಆಫ್‌ ಮಾಡುವುದೇ ಇಲ್ಲ ಎಂದರು.

ಕೋಲಾರ ಜಿಲ್ಲೆಯಲ್ಲಿ 1,100 ಅಡಿ ಕೊರೆದರೂ ಹನಿ ನೀರು ಸಿಕ್ಕುತ್ತಿಲ್ಲ. ಅಂತರ್ಜಲ ಮಟ್ಟ ದಿನೇದಿನೇ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ವಿದ್ಯುತ್‌ ಕಡಿತ ರೈತರಿಗೆ ಒಂದು ರೀತಿಯಲ್ಲಿ ವರದಾನವೆ ಸರಿ ಎಂದು ಸಚಿವರು ಅಭಿಪ್ರಾಯಪಟ್ಟರು.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X