ಹುತ್ತರಿ ಮಾಡಿರೊ ಕೊಡವರೆಲ್ಲರೂ; ನ.27 ಕೊಡಗು ಜಿಲ್ಲೆಯಲ್ಲಿ ರಜೆ
ಹುತ್ತರಿ ಮಾಡಿರೊ ಕೊಡವರೆಲ್ಲರೂ; ನ.27 ಕೊಡಗು ಜಿಲ್ಲೆಯಲ್ಲಿ ರಜೆ
ಸರಕಾರಿ ನೌಕರರಿಗೆ ರಜವೋ ಮಜ... ಕಿರು ಪ್ರವಾಸದ ಖುಷಿ ಎಲ್ಲೆಡೆ ಕಾಣುತ್ತಿದೆ....
ನೆಗೋಷಿಯಬಲ್ ಇನ್ಸುಟ್ರುಮೆಂಟ್ ಆ್ಯಕ್ಟ್‌ನಡಿ ಸರಕಾರ ರಜೆ ನೀಡಿದ್ದು , ಕೊಡಗು ಜಿಲ್ಲೆಯ ಜನರಲ್ಲಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ನಮಗೇನೂ ಇಲ್ಲವೇ ಎಂದು ಮುಖ ನೋಡುವ ಇತರೇ ಜಿಲ್ಲೆಯ ನೌಕರರತ್ತ ಸಹಾ ಸರಕಾರ ಗಮನ ಹರಿಸಿದೆ. ರಾಜ್ಯಾದ್ಯಂತ ಎಲ್ಲಾ ನೌಕರರಿಗೆ ಅನ್ವಯವಾಗುವಂತೆ ಶನಿವಾರ(ನ.27)ವನ್ನು ನಿರ್ಬಂಧಿತ ರಜಾದಿನವನ್ನಾಗಿ ಪರಿವರ್ತಿಸಿದೆ.
ಮೊನ್ನೆಯಷ್ಟೇ ದಸರಾ ಹಾಗೂ ದೀಪಾವಳಿ ಹಬ್ಬದ ನೆಪದಲ್ಲಿ ಸಾಲುಸಾಲು ರಜಾ ಪಡೆದಿದ್ದ ನೌಕರರು, ಹುತ್ತರಿ ನೆಪದಲ್ಲಿ ತಮ್ಮ ರಜಾ ದಿನಗಳ ಬಳಕೆಗೆ ಯೋಜನೆ ರೂಪಿಸುತ್ತಿದ್ದಾರೆ. ವರ್ಷದ ಕಡೆಯ ತಿಂಗಳು ಹತ್ತಿರದಲ್ಲಿಯೇ ಇರುವುದರಿಂದ, ರಜಾ ಮುಗಿಸುವ ನೆಪದಲ್ಲಿ ಪುಟ್ಟದೊಂದು ಟೂರ್ ಮಾಡುವ ಕಾರ್ಯಕ್ರಮ ಬಹುತೇಕರಲ್ಲಿದೆ.
(ಇನ್ಫೋ ವಾರ್ತೆ)
Post your views
ಮುಖಪುಟ / ವಾರ್ತೆಗಳು












Click it and Unblock the Notifications