ರಿಲಯನ್ಸ್ ದಾಯಾದಿ ಕಲಹ ಉಲ್ಬಣ ; 6 ನಿರ್ದೇಶಕರ ರಾಜೀನಾಮೆ
ರಿಲಯನ್ಸ್ ದಾಯಾದಿ ಕಲಹ ಉಲ್ಬಣ ; 6 ನಿರ್ದೇಶಕರ ರಾಜೀನಾಮೆ
ಮುಂಬಯಿ ಷೇರುಪೇಟೆಯ ಮೇಲೆ ರಿಲಯನ್ಸ್ ನಿರ್ದೇಶಕರ ರಾಜೀನಾಮೆ ನೆರಳು
ಬೋರ್ಡ್ ಆಫ್ ಡೈರೆಕ್ಟರ್ ಆಫ್ ರಿಲಯನ್ಸ್ ಎನರ್ಜಿಯಿಂದ ಹೊರ ಬಂದಿರುವ ನಿರ್ದೇಶಕರು, ತಮ್ಮ ರಾಜೀನಾಮೆ ಪತ್ರವನ್ನು ಅನಿಲ್ ಅಂಬಾನಿಗೆ ಸಲ್ಲಿಸಿದ್ದಾರೆ. ಕಾರ್ಯ ನಿರ್ವಾಹಕ ಛೇರ್ಮನ್ ಎಸ್.ಸಿ. ಗುಪ್ತಾ, ಜೆ.ಪಿ. ಚಲಸನ್ನಿ, ಕೆ.ಎಂ. ಮಂಕಾಡ್, ಜೆ. ರಾಮಚಂದ್ರನ್, ಅಮಿತಾಬ್, ಸತೀಶ್ ಶೇಠ್ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆಗೆ ಕಾರಣ ಸೂಚಿಸದಿದ್ದರೂ, ಸಹೋದರರ ನಡುವಿನ ವೈಮನಸ್ಯವೇ ಮೂಲ ಕಾರಣ. ಬಾಂಬೆ ಷೇರು ಮಾರುಕಟ್ಟೆಯಲ್ಲಿ ನಿರ್ದೇಶಕರ ರಾಜೀನಾಮೆ ಗಂಭೀರ ಪರಿಣಾಮ ಬೀರಲಿದೆ ಎನ್ನಲಾಗಿದೆ.
ರಿಲಯನ್ಸ್ ಒಡೆತನದ ವಿವಾದ ಕಾವು ಪಡೆದ ತಕ್ಷಣ, ಅಮೇರಿಕಾದಿಂದ ದಿಢೀರ್ ಆಗಮಿಸಿದ್ದ ಮುಖೇಶ್ ಅಂಬಾನಿ, ನಮ್ಮಲ್ಲಿ ಮಾಲೀಕತ್ವದ ಯಾವುದೇ ಗೊಂದಲಗಳಿಲ್ಲ. ನಮ್ಮ ಕುಟುಂಬದ ಸಣ್ಣಪುಟ್ಟ ವ್ಯತ್ಯಾಸಗಳನ್ನು ನಾವೇ ಸರಿಪಡಿಸಿಕೊಳ್ಳುತ್ತೇವೆ ಎಂದಿದ್ದರು.
ತನ್ನ ಅಣ್ಣ ಮುಖೇಶ್ ಜೊತೆಗೆ ಅನಿಲ್ ಅಂಬಾನಿ ನಡೆಸಿದ ಮಾತುಕತೆ ವಿವರಗಳು ಲಭ್ಯವಾಗಿಲ್ಲ. ನಂತರ ಸಹೋದರರಿಬ್ಬರೂ ಪ್ರತ್ಯೇಕವಾಗಿ ಕಾನೂನು ಪರಿಣಿತರ ಸಲಹೆ ಪಡೆಯುತ್ತಿರುವುದರಿಂಗ, ವಿವಾದ ಮತ್ತಷ್ಟು ಬಿಸಿಯಾಗಿದೆ ಎನ್ನಲಾಗಿದೆ. ರಿಲಯನ್ಸ್ ಕಂಪನಿ ಸದ್ಯಕ್ಕೆ ಗೊಂದಲದ ಗೂಡು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications