ಕಂಚಿ ಕ್ರೆೃಂ ಸ್ಟೋರಿಗೆ ಹೊಸ ತಿರುವು- ಪ್ರಮುಖ ಸಾಕ್ಷಿ ಹೇಳಿಕೆ ಬದಲು
ಕಂಚಿ ಕ್ರೆೃಂ ಸ್ಟೋರಿಗೆ ಹೊಸ ತಿರುವು- ಪ್ರಮುಖ ಸಾಕ್ಷಿ ಹೇಳಿಕೆ ಬದಲು
ಮಠಕ್ಕೆ ಕಳೆದ ತಿಂಗಳಷ್ಟೇ ರಾಧಾಕೃಷ್ಣ ಪರಿಚಿತನಾಗಿದ್ದ ಎನ್ನುತ್ತಿವೆ ಮಠದ ಮೂಲಗಳು
ಕಾಂಚೀಪುರಂ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಆರೋಪಿ ಕದಿವರನ್‌ನನ್ನು ನ.3 ರಂದು ಹಾಜರು ಪಡಿಸಿದಾಗ ಆತ ಪೋಲೀಸರಿಗೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದಾನೆ. ನನ್ನನ್ನು ಬಂಧಿಸಿದ ಪೋಲೀಸರು ಪ್ರತಿ ದಿನ ನಾನಾ ಚಿತ್ರಹಿಂಸೆಗಳನ್ನು ನೀಡಿ, ಸಿದ್ಧ ಹೇಳಿಕೆಗಳಿಗೆ ನನ್ನನ್ನು ಒಪ್ಪಿಸಿದರು. ಕಂಚಿ ಶ್ರೀಗಳ ವಿರುದ್ಧದ ನನ್ನ ಇದುವರೆಗಿನ ಎಲ್ಲಾ ಹೇಳಿಕೆಗಳು ಬಲವಂತದ ಹೇಳಿಕೆಗಳಾಗಿವೆ ಎಂದು ಕದಿವರನ್ ಬಹಿರಂಗ ಪಡಿಸಿದ್ದಾನೆ.
ಕದಿವರನ್ ಮತ್ತು ರಜನಿ ಅಲಿಯಾಸ್ ಚಿನ್ನ ನೀಡಿದ ಮಾಹಿತಿ ಮೇರೆಗೆ ಕಂಚಿಶ್ರೀಗಳ ಬಂಧಿಸಿದ್ದಾಗಿ ಪೋಲೀಸರು ಹೇಳಿದ್ದರು.
ರಾಧಾಕೃಷ್ಣ ಪ್ರಕರಣ: ಸೆಪ್ಟೆಂಬರ್ 2002 ರಲ್ಲಿ ಶ್ರೀಗಳು, ಚೆನ್ನೈ ಮೂಲದ ಜಿ. ರಾಧಾಕೃಷ್ಣ ಎಂಬಾತನ ಮೇಲೆ ಹಲ್ಲೆ ಮಾಡಿಸಿ, ಕೊಲೆಗೆ ಪ್ರಯತ್ನಿಸಿದ್ದಾರೆ ಎನ್ನುವುದು ಪೋಲೀಸರ ವಾದ. ಆದರೆ ವಾಸ್ತವವಾಗಿ ರಾಧಾಕೃಷ್ಣ ಮಠಕ್ಕೆ ಕಳೆದ ತಿಂಗಳಷ್ಟೇ ಭೇಟಿಯಾಗಿ ಪರಿಚಿತನಾಗಿದ್ದ ಎಂದು ಮಠದ ಮೂಲಗಳು ತಿಳಿಸಿವೆ. ಆದರೆ ಈ ಬಗೆಗೆ ಮಠ ತನ್ನ ಮುಂದಿನ ನಡೆಯನ್ನು ಪ್ರಕಟಿಸಿಲ್ಲ.
ಇತ್ತ ತಮಿಳುನಾಡಿನ ಡಿಎಂಕೆ ಮುಖಂಡ ಕರುಣಾನಿಧಿ, ಕಂಚಿ ಶ್ರೀಗಳ ಮೇಲೆ ಮತ್ತೊಂದು ಪ್ರಕರಣ ದಾಖಲಿಸಿ ಜಯಲಲಿತಾ ತಮ್ಮ ವೈಯುಕ್ತಿಕ ಹಗೆಯನ್ನು ಸಾಬೀತು ಪಡಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications